ಕಿರುಕುಳ ಆರೋಪ: ಪ.ಪಂ. ಸದಸ್ಯನ ವಿರುದ್ಧ ಮಹಿಳೆ ದೂರು

Update: 2019-06-19 18:37 GMT

ಶೃಂಗೇರಿ, ಜೂ.19: ಒಂದನೇ ವಾರ್ಡಿನಿಂದ ಪಟ್ಟಣ ಪಂಚಾಯತ್‍ಗೆ ಆಯ್ಕೆಗೊಂಡ ಸ್ವತಂತ್ರ ಅಭ್ಯರ್ಥಿ ರಫೀಕ್ ಅಹಮದ್ ಅವರ ಮೇಲೆ ಮಂಗಳವಾರ ಎಫ್‍ಐಆರ್ ದಾಖಲಾಗಿದೆ.

ರಫೀಕ್ ಅಹಮದ್ ಅವರು ಕುರುಬಕೇರಿ ನಿವಾಸಿಯಾದ ಮಹಿಳೆಯ ಮನೆಗೆ ಸೋಮವಾರ ಸಂಜೆ 5 ಗಂಟೆ ಅತಿಕ್ರಮಣ ಪ್ರವೇಶ ಮಾಡಿ ಕೈಹಿಡಿದು ಎಳೆದಾಡಿದ್ದು, ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. 

ರಫೀಕ್ ಅವರು ಯಾರಿಂದಲೋ ನನ್ನ ಮೊಬೈಲು ನಂಬರ್ ಪಡೆದು ಮೆಸೇಜ್ ಹಾಗೂ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾನೆ. ನಾನು ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಪೋನ್ ಮಾಡಿ ಯಾವಾಗ ಊರಿಗೆ ಬರುತ್ತೀಯಾ? ಎಂದು ಪದೇಪದೇ ಕೇಳುತ್ತಿದ್ದ. ನಾನು ಮನೆಯಿಂದ ಹೊರಗಡೆ ಹೋದಾಗ ನನ್ನ ಬಳಿ ಆಟೋ ತಂದು ನಿಲ್ಲಿಸಿ ಬಾ ನಿನ್ನನ್ನು ಡ್ರಾಪ್ ಮಾಡುತ್ತೇನೆ. ಹೋಟೇಲ್ ಗೆ ಹೋಗೋಣ. ತಿಂಡಿ ಕೊಡಿಸುತ್ತೇನೆ ಎಂದು ಆಗಾಗ್ಗೆ ಪೀಡಿಸುತ್ತಿದ್ದ. ಈ ವಿಷಯವನ್ನು ನಾನು ಪತಿಯಲ್ಲಿ ಹೇಳಿಕೊಂಡರೆ ಗಲಾಟೆ ನಡೆಯಬಹುದು ಎಂಬ ಕಾರಣಕ್ಕೆ ತಾಳ್ಮೆಯಿಂದ ವರ್ತಿಸಿದ್ದೇನೆ. ಆದರೆ ಇನ್ನೂ ಸುಮ್ಮನಿರುವುದಲ್ಲಿ ಅರ್ಥವಿಲ್ಲ ಎಂದು ನಡೆದ ವಿಚಾರವನ್ನೆಲ್ಲಾ ಗಂಡನಿಗೆ ತಿಳಿಸಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಎಫ್‍ಆರ್‍ಐ ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News