ದಿಲ್ಲಿ- ಮುಂಬೈ ರೈಲು ಪ್ರಯಾಣ ಇನ್ನು ಹತ್ತೇ ಗಂಟೆ!

Update: 2019-06-20 04:07 GMT

ಹೊಸದಿಲ್ಲಿ, ಜೂ.20: ಮುಂದಿನ ನಾಲ್ಕು ವರ್ಷಗಳಲ್ಲಿ ದಿಲ್ಲಿ- ಮುಂಬೈ ನಡುವಿನ ರೈಲು ಪ್ರಯಾಣದ ಅವಧಿ ಕೇವಲ 10 ಗಂಟೆಗೆ ಇಳಿಯಲಿದೆ. ಅಂತೆಯೇ ಕೇವಲ 12 ಗಂಟೆಯಲ್ಲಿ ರಾಷ್ಟ್ರ ರಾಜಧಾನಿಯಿಂದ ಕೊಲ್ಕತ್ತಾ ತಲುಪಬಹುದು!

ಇದು ರೈಲ್ವೆ ಇಲಾಖೆ ಹಾಕಿಕೊಂಡಿರುವ ಗುರಿ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಗರಿಷ್ಠ ವೇಗವನ್ನು 160 ಕಿಲೋಮೀಟರ್‌ಗೆ ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದ್ದು, ಇದರಿಂದಾಗಿ ದೇಶದ ರಾಜಧಾನಿ ಹಾಗೂ ವಾಣಿಜ್ಯ ರಾಜಧಾನಿ, ದಿಲ್ಲಿ- ಕೊಲ್ಕತ್ತಾ ನಡುವಿನ ಪ್ರಯಾಣ ಅವಧಿ ಐದೂವರೆ ಗಂಟೆಯಷ್ಟು ಕಡಿಮೆಯಾಗಲಿದೆ. ಪ್ರಸ್ತುತ ಅತಿವೇಗದ ರೈಲು ರಾಜಧಾನಿ ಎಕ್ಸ್‌ಪ್ರೆಸ್ 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

ನರೇಂದ್ರ ಮೋದಿ ಸರ್ಕಾರದ ಎರಡನೇ ಇನಿಂಗ್ಸ್‌ನ 100 ದಿನಗಳ ಕಾರ್ಯಸೂಚಿಗೆ ರೈಲ್ವೆ ಇಲಾಖೆ ಸಲ್ಲಿಸಿದ ಹಲವು ಪ್ರಸ್ತಾವಗಳಲ್ಲಿ ಇದು ಕೂಡಾ ಸೇರಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರೈಲ್ವೆ ಮೂಲಸೌಕರ್ಯವನ್ನು ಉನ್ನತೀಕರಿಸಲು 13,500 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಉದ್ದೇಶಿಸಿದೆ.

ರೈಲ್ವೆ ಜಾಲದಲ್ಲಿ ಶೇಕಡ 30ರಷ್ಟು ಪ್ರಯಾಣಿಕ ರೈಲು ಮತ್ತು ಶೇಕಡ 20ರಷ್ಟು ಸರಕು ಸಾಗಣೆ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ಹಳಿಗಳ ಮೂಲಸೌಕರ್ಯ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News