ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-06-21 18:36 GMT

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಡೆರೆಕ್ ಒ’ಕಾನರ್ ಸ್ಕಾಲರ್‌ಶಿಪ್ 2019

ವಿವರ: ಬಿಸಿನೆಸ್ ಅನಾಲಿಟಿಕ್ಸ್ ಅಧ್ಯಯನಕ್ಕೆ ನೋಂದಾಯಿಸಲು ಹಾಗೂ ಪೂರ್ಣಾವಧಿ ಇಯು ಬೋಧನಾ ಶುಲ್ಕ ಸ್ಕಾಲರ್‌ಶಿಪ್ ಪಡೆಯಲು ಯುಸಿಡಿ ಮಿಶೆಲ್ ಸ್ಮಫಿಟ್ ಗ್ರಾಜುವೇಟ್ ಬಿಸಿನೆಸ್ ಸ್ಕೂಲ್ ಭಾರತೀಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಯುಸಿಡಿ ಮಿಶೆಲ್ ಸ್ಮಫಿಟ್ ಗ್ರಾಜುವೇಟ್ ಬಿಸಿನೆಸ್ ಸ್ಕೂಲ್‌ನಲ್ಲಿ ಬಿಸಿನೆಸ್ ಅನಾಲಿಟಿಕ್ಸ್ ವಿಷಯದಲ್ಲಿ ಎಂಎಸ್ಸಿಗೆ ಅರ್ಹರಾಗಿರುವ ಪದವಿ ಅಥವಾ ತತ್ಸಮಾನ ಅರ್ಹತೆಯ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. 7.0 ಅಥವಾ ಹೆಚ್ಚಿನ ಐಇಎಲ್‌ಟಿಎಸ್ ಅಂಕ ಅಥವಾ 120ರಲ್ಲಿ 100 ಅಥವಾ ಹೆಚ್ಚಿನ ಟಿಒಇಎಫ್‌ಎಲ್ ಅಂಕ ಗಳಿಸಿದವರು ಅರ್ಹರು.
ನೆರವು: ಆಯ್ಕೆಯಾದವರು 13,995 ಯುರೋವರೆಗಿನ ಪೂರ್ಣಾವಧಿಯ ಇಯು ಬೋಧನಾ ಶುಲ್ಕ ಪಡೆಯುತ್ತಾರೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 28, 2019
ಅರ್ಜಿ : ಆನ್‌ಲೈನ್‌ನಲ್ಲಿ ಇ ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DSC3

****************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಎಎಂಡಿಟಿ ಕ್ರಿಯೇಟಿವ್ ಸ್ಕಾಲರ್‌ಶಿಪ್ 2019

 ವಿವರ: ಎಎಂಡಿಟಿ ಸ್ಕೂಲ್ ಆಫ್ ಕ್ರಿಯೇಟಿವ್ ಸಂಸ್ಥೆಯಲ್ಲಿ ಪದವಿ ಮಟ್ಟದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸ್ಕಾಲರ್‌ಶಿಪ್ ಪಡೆದು ಪಾಲ್ಗೊಳ್ಳಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಶ್ರೀಲಂಕಾದಲ್ಲಿ ಸೃಜನಶೀಲ ಕೋರ್ಸ್‌ಗಳನ್ನು ಅಧ್ಯಯನ ನಡೆಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: ಕನಿಷ್ಠ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಅರ್ಹರು. ಎಎಂಡಿಟಿ ಸ್ಕೂಲ್ ಆಫ್ ಕ್ರಿಯೇಟಿವ್ ಆಯಾ ಕೋರ್ಸ್‌ಗಳಿಗೆ ನಿಗದಿಗೊಳಿಸಿದ ಪ್ರವೇಶ ಅರ್ಹತೆಯನ್ನು ಹೊಂದಿರಬೇಕು.
ನೆರವು: ಆಯ್ಕೆಯಾದವರಿಗೆ ಶೈಕ್ಷಣಿಕ ವೆಚ್ಚವಾಗಿ 3 ಲಕ್ಷ ಎಲ್‌ಕೆಆರ್ (ಶ್ರೀಲಂಕಾದ ರೂಪಾಯಿ) ನೀಡಲಾಗುವುದು. ಅಲ್ಲದೆ ಕೋರ್ಸ್ ಮುಗಿಸಿದ ಬಳಿಕ ಪಿಯರ್ಸನ್ ಬಿಟೆಕ್-ಎಚ್‌ಎನ್‌ಡಿ ಸೃಜನಶೀಲ ಅರ್ಹತೆ ಗಳಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/AMD1
****************

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಫಿನ್‌ಕ್ಯಾಡ್ಸ್ ವುಮೆನ್ ಇನ್ ಫೈನಾನ್ಸ್ ಸ್ಕಾಲರ್‌ಶಿಪ್ 2019

 ವಿವರ: ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಅಧ್ಯಯನಕ್ಕೆ ಬೆಂಬಲ ನೀಡುವ ಸಲುವಾಗಿ, ಅರ್ಥಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲು ಫಿನ್‌ಕ್ಯಾಡ್ ಮಹಿಳಾ ಅಭ್ಯರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸುತ್ತಿದೆ.
ಅರ್ಹತೆ: ಸ್ನಾತಕೋತ್ತರ ಮಟ್ಟದಲ್ಲಿ ಅರ್ಥಶಾಸ್ತ್ರ(ವಿಶೇಷವಾಗಿ ಹಣಕಾಸು ಆಸ್ತಿ ನಿರ್ವಹಣೆ) ವಿಷಯದಲ್ಲಿ ಪೂರ್ಣಾವಧಿ ಅಧ್ಯಯನ ನಡೆಸುತ್ತಿರುವ ಭಾರತದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಮಹಿಳೆಯರಿಗೆ ಬೋಧನಾ ಶುಲ್ಕ ಹಾಗೂ ಶೈಕ್ಷಣಿಕ ವೆಚ್ಚವಾಗಿ 20 ಸಾವಿರ ಅಮೆರಿಕನ್ ಡಾಲರ್ ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/FIN22

**************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಡೀಲ್ಸ್‌ಶಟರ್ ಸ್ಕಾಲರ್‌ಶಿಪ್ 2019

ವಿವರ: ಡೀಲ್ಸ್‌ಶಟರ್ ಇಂಡಿಯಾ ಅಂತರ್‌ರಾಷ್ಟ್ರೀಯ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದು ವಿಜೇತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚಕ್ಕೆ ಸ್ಕಾಲರ್‌ಶಿಪ್ ನೀಡುತ್ತದೆ. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಕಾಲೇಜು ಬೋಧನಾ ಶುಲ್ಕ ಪಾವತಿಗೆ ನೇರ ಆರ್ಥಿಕ ನೆರವು ಒದಗಿಸಲಾಗುವುದು.
ಅರ್ಹತೆ: ವಿಶ್ವದಾದ್ಯಂತದ ಯಾವುದೇ ವಿವಿಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟೋರಲ್ ಹಂತದ ಅಧ್ಯಯನ ನಡೆಸುವ, ಯಾವುದೇ ವಯೋಮಾನದ ಭಾರತೀಯ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅತ್ಯುತ್ತಮ ಪ್ರಬಂಧಗಳಿಗೆ 500 ಅಮೆರಿಕನ್ ಡಾಲರ್ ಮೊತ್ತವನ್ನು , ವಿಜೇತ ವಿದ್ಯಾರ್ಥಿಗಳ ಬೋಧನಾ ಶುಲ್ಕದ ಬದಲಿಗೆ ನೇರವಾಗಿ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳಿಗೆ ಪಾವತಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019
ಅರ್ಜಿ: ಆನ್‌ಲೈನ್‌ನಲ್ಲಿ ಇ ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DSS9

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News