ಹನೂರು: ಟ್ರಾನ್ಸ್ ಪಾರ್ಮರ್ ದುರಸ್ತಿಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ- ರೈತರ ಆಕ್ರೋಶ

Update: 2019-06-24 18:39 GMT

ಹನೂರು, ಜೂ.24: ಟ್ರಾನ್ಸ್ ಪಾರ್ಮರ್ ಕೆಟ್ಟು ಹಲವು ದಿನಗಳು ಕಳೆದರೂ ಚೆಸ್ಕಾಂ ಅಧಿಕಾರಿಗಳು ದುರಸ್ತಿಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಹನೂರು ಪಟ್ಟಣದ ಹೊರ ವಲಯದಲ್ಲಿರುವ ಭಟ್ಟಕುಪ್ಪೆ ಜಮೀನುಗಳ ಸಮೀಪವಿರುವ ಟ್ರಾನ್ಸ್ ಪಾರ್ಮರ್ ಸುಟ್ಟು ಹೋಗಿ ಹಲವು ದಿನ ಕಳೆದರೂ ಸಹ ಚೆಸ್ಕಾಂ ಅಧಿಕಾರಿಗಳು ರಿಪೇರಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಕೆಲ ರೈತ ಮುಖಂಡರು ಚೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಹಾಗೂ ಮುಖ್ಯ ಕಾರ್ಯಪಾಲಕ ಅಭಿಯಂತರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭಟ್ಟಕುಪ್ಪೆ ಆಸುಪಾಸಿನ ಜಮೀನುಗಳಲ್ಲಿ ರೈತರು ತುಂಬಾ ಕಷ್ಟ ಪಟ್ಟು ಬೆಳೆ ಬೆಳೆದಿದ್ದಾರೆ. ಆದರೆ ಕಳೆದ ಹಲವು ದಿನಗಳಿಂದಾಗಿ ನೀರಿನ ಕೊರತೆಯಿಂದಾಗಿ ಬೆಳೆಯು ನಾಶವಾಗುತ್ತಿದ್ದು, ಬೆಳೆಯನ್ನು ಉಳಿಸಿಕೊಳ್ಳಲಾಗದೆ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ದುರಸ್ತಿ ಕಾರ್ಯ ಇನ್ನೂ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತ್ರ ಕೆಲವು ಕಡೆ ಮಂದಗತಿಯಲ್ಲಿ ಸಾಗಿದ್ದರೆ ಇನ್ನೂ ಹಲವು ಕಡೆ ದುರಸ್ತಿ  ಕಾರ್ಯವೇ ಪ್ರಾರಂಭವಾಗಿಲ್ಲ .ಆದರೆ ರೈತರು ನಿಟ್ಟಿಸಿರು ಮಾತ್ರ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News