ಜಾರ್ಖಂಡ್ ಗುಂಪು ಹತ್ಯೆಯಿಂದ ನೋವಾಗಿದೆ, ಆದರೆ ಇಡೀ ರಾಜ್ಯವನ್ನು ದೂಷಿಸಬಾರದು: ಪ್ರಧಾನಿ ಮೋದಿ

Update: 2019-06-26 12:10 GMT

ಹೊಸದಿಲ್ಲಿ, ಜೂ.26: ಜಾರ್ಖಂಡ್ ನಲ್ಲಿ ಯುವಕನೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಘಟನೆಯಿಂದ ತನಗೆ ನೋವಾಗಿದ್ದು, ಆದರೆ ಘಟನೆಗೆ ಇಡೀ ರಾಜ್ಯವನ್ನೇ ದೂರುವುದು ಸರಿಯಲ್ಲ ಎಂದು ಪ್ರಧಾನಿ  ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಜಾರ್ಖಂಡನ್ನು ಗುಂಪು ಹತ್ಯೆಯ ಫ್ಯಾಕ್ಟರಿ ಎಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ರಾಜ್ಯವನ್ನು ಅವಮಾನಿಸಲು ಯಾರಿಗೂ ಹಕ್ಕಿಲ್ಲ ಎಂದರು.

“ಜಾರ್ಖಂಡ್ ನಲ್ಲಿ ನಡೆದ ಗುಂಪು ಥಳಿತದಿಂದ ನೋವಾಗಿದೆ. ಇದರಿಂದ ಇತರರಿಗೂ ನೋವಾಗಿದೆ. ಆದರೆ ರಾಜ್ಯಸಭೆಯಲ್ಲಿ ಕೆಲವರು ಜಾರ್ಖಂಡನ್ನು ಗುಂಪು ಥಳಿತದ ಫ್ಯಾಕ್ಟರಿ ಎನ್ನುತ್ತಿದ್ದಾರೆ. ಇದು ನ್ಯಾಯವೇ?, ಅವರು ರಾಜ್ಯವನ್ನು ಏಕೆ ಅವಮಾನಿಸುತ್ತಿದ್ದಾರೆ?” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News