2030ರ ವೇಳೆಗೆ 2 ಕೋಟಿ ಉದ್ಯೋಗ ಕಸಿಯಲಿದೆ ರೋಬೊಟ್ ಗಳು!

Update: 2019-06-26 15:55 GMT

ವಾಶಿಂಗ್ಟನ್, ಜೂ. 26: ರೋಬೊಟ್‌ಗಳು 2030ರ ವೇಳೆಗೆ, ಸುಮಾರು 2 ಕೋಟಿ ಉತ್ಪಾದನಾ ಕೆಲಸಗಳನ್ನು ಮಾನವರಿಂದ ಕಿತ್ತುಕೊಳ್ಳುತ್ತದೆ ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಈ ಬೆಳವಣಿಗೆಯು ಸಾಮಾಜಿಕ ತಾರತಮ್ಯವನ್ನು ಇನ್ನಷ್ಟು ಬಿಗಡಾಯಿಸುತ್ತದೆ, ಆದರೆ, ಅದೇ ವೇಳೆ ಒಟ್ಟಾರೆ ಆರ್ಥಿಕತೆಯನ್ನು ಸುಧಾರಿಸುತ್ತದೆ ಎಂಬುದಾಗಿ ಭಾವಿಸಲಾಗಿದೆ.

ಯಂತ್ರಗಳು ಮತ್ತು ರೋಬೊಟ್‌ಗಳು ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತವೆಯಾದರೂ, ಕಡಿಮೆ ನೈಪುಣ್ಯದ ಕೆಲಸಗಳನ್ನು ಕೊಲ್ಲುತ್ತದೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯವನ್ನು ಹೆಚ್ಚಿಸುತ್ತದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ನಡೆಸಿದ ಅಧ್ಯಯನ ಹೇಳಿದೆ.

ರೋಬೊಟ್‌ಗಳಿಂದಾಗಿ ನಷ್ಟವಾಗುವ ಉದ್ಯೋಗಗಳು ಜಗತ್ತಿನಾದ್ಯಂತ ಅಥವಾ ಒಂದೇ ದೇಶದೊಳಗೆ ಒಂದೇ ಸಮನಾಗಿ ಹರಡಿಕೊಳ್ಳುವುದಿಲ್ಲ ಎಂದು ಅದು ತಿಳಿಸಿದೆ.

 ರೋಬೊಟ್‌ಗಳು ಈಗಾಗಲೇ ಕೋಟ್ಯಂತರ ಉತ್ಪಾದನಾ ಕೆಲಸಗಳನ್ನು ವಹಿಸಿಕೊಂಡಿದೆ ಹಾಗೂ ಕಂಪ್ಯೂಟರ್ ತಂತ್ರಜ್ಞಾನದ ಸುಧಾರಣೆಯೊಂದಿಗೆ ಸೇವೆಗಳ ವಿಭಾಗದಲ್ಲೂ ದಾಪುಗಾಲಿಟ್ಟಿದೆ.

ಒಂದೇ ದೇಶದ ಒಳಗಾದರೂ, ಕಡಿಮೆ ನೈಪುಣ್ಯದ ವಲಯಗಳಲ್ಲಿ ನಷ್ಟವಾಗುವ ಉದ್ಯೋಗಗಳ ಪ್ರಮಾಣವು ಉನ್ನತ ನೈಪುಣ್ಯದ ವಲಯಗಳಲ್ಲಿ ನಷ್ಟವಾಗುವ ಉದ್ಯೋಗಗಳಿಗಿಂತ ದುಪ್ಪಟ್ಟಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News