ಹನೂರು: ಮಾದಕ ವಸ್ತುಗಳ ವಿರೋಧಿ ದಿನಾಚರಣೆ, ಅರಿವು ಕಾರ್ಯಕ್ರಮ

Update: 2019-06-26 18:50 GMT

ಹನೂರು, ಜೂ.26: ಹನೂರು ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮವನ್ನು ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹನೂರು ಪೊಲೀಸ್ ಠಾಣಾ ಸಬ್‌ಇನ್‌ಸ್ಪೆಕ್ಟರ್ ನಾಗೇಶ್ ಅವರು, ಸಾರ್ವಜನಿಕರು ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸಬೇಕು. ನೀವು ದುಡಿದು ಗಳಿಸಿದ ಹಣದಿಂದ ಮಾದಕ ವಸ್ತುಗಳನ್ನು ಕೊಂಡು ಸೇವೆನೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಟಪರಿಣಾಮಗಳು ಬೀರುತ್ತವೆ. ಜೊತೆಗೆ ನಿಮ್ಮ ಹಣ ಕೂಡಾ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್‌ಐ ತೋಟಂದಾರ್ಯ, ಮುಖ್ಯಪೇದೆ ಗೋಪಾಲ್, ಪೊಲೀಸ್ ಸಿಬ್ಬಂದಿಗಳಾದ ಪವಿತ್ರ, ಶಿವಪ್ರಸಾದ್, ಗೃಹ ರಕ್ಷಕ ದಳ ಸಿಬ್ಬಂದಿಗಳಾದ ರಘು, ವಿಷಕಂಠ ಮೂರ್ತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News