​ಉಪ್ಪಾರಹಳ್ಳಿ ಅಂಡರ್‍ಪಾಸ್‍ನಲ್ಲಿ ಆಟೋಗಳಿಗೆ ನಿರ್ಬಂಧ

Update: 2019-06-27 18:41 GMT

ತುಮಕೂರು: ನಗರದ ರೈಲ್ವೇ ಸ್ಟೇಷನ್ ರಸ್ತೆಯ ಉಪ್ಪಾರಹಳ್ಳಿಯ ಅಂಡರ್‍ಪಾಸ್ ಸಮಸ್ಯೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಶಾಂತಿನಗರ, ಉಪ್ಪಾರಹಳ್ಳಿ, ಚೆನ್ನಬಸವೇಶ್ವರ ಬಡಾವಣೆಯ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳ ಒಡಾಟಕ್ಕೆ ಅನುಕೂಲವಾಗುವಂತೆ ಈ ಹಿಂದೆ ನಿರ್ಮಾಣ ಮಾಡಲಾಗಿದ್ದು, ಆದರೆ ಈ ಅಂಡರ್ ಪಾಸ್‍ನಲ್ಲಿ ಆಟೋ ರಿಕ್ಷಾಗಳು ಸಂಚಾರ ಮಾಡುತ್ತಿದ್ದು, ವಾಹನ ದಟ್ಟಣೆಯಿಂದ ಚಿಕ್ಕಮಕ್ಕಳು, ಶಾಲಾ – ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಈ ಭಾಗದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದ್ದು, ಸಾರ್ವಜನಿಕರು ಶಾಸಕರ ಬಳಿ ಬಂದು ದೂರು ನೀಡಿದ್ದರು.

ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ರೈಲ್ವೇ ಅಧಿಕಾರಿಗಳು ಹಾಗೂ  ಸಂಚಾರ ಪೋಲಿಸ್ ಇನ್ಸ್‍ಪೆಕ್ಟರ್‍ರನ್ನು ಸ್ಥಳ ಪರಿಶೀಲನೆ ಕರೆದೊಯ್ದು ವಸ್ತುಸ್ಥಿತಿಯ ಬಗ್ಗೆ ಸ್ಥಳದಲ್ಲಿಯೇ ಮಾಹಿತಿ ಪಡೆದುಕೊಂಡರು.

ಈ ಅಂಡರ್‍ಪಾಸ್‍ನಲ್ಲಿ ಕೇವಲ ಪಾದಚಾರಿಗಳು ಹಾಗೂ ದ್ವಿ ಚಕ್ರ ವಾಹನ ಮಾತ್ರ ಸಂಚಾರ ಮಾಡಲು ಅವಕಾಶ ನೀಡಿ, ಈ ಅಂಡರ್ ಪಾಸ್‍ನಲ್ಲಿ  ಆಟೋ ರಿಕ್ಷಾ ಸೇರಿದಂತೆ ಉಳಿದ ವಾಹನಗಳ ನಿರ್ಬಂಧ ಮಾಡಿ, ಅಂತಹ ವಾಹನಗಳು ಪ್ಲೈಓವರ್‍ನಿಂದಲೇ ಸಂಚಾರ ಮಾಡುವಂತೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News