ಕೊಳ್ಳೇಗಾಲ: ಕೆಂಪೇಗೌಡ ಜಯಂತಿ ಆಚರಣೆ

Update: 2019-06-27 18:49 GMT

ಕೊಳ್ಳೇಗಾಲ, ಜೂ.27: ಇಂದು ಬೆಂಗಳೂರು ಇಡೀ ಪ್ರಪರಂಚದಲ್ಲಿ ಪ್ರಸಿದ್ಧ ಹೊಂದಿದೆ ನಗರವಾಗಿದೆ ಎಂದರೆ ಅದಕ್ಕೆ ಕೆಂಪೇಗೌಡ ಅವರು ಕಾರಣವಾಗಿದ್ದಾರೆ ಎಂದು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ತಿಳಿಸಿದರು.  

ಕೊಳ್ಳೇಗಾಲ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಈ ಬೆಂಗಳೂರು ನಗರದಲ್ಲಿ ಕೆರೆಕಟ್ಟೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರವಾದ ಪೇಟೆಬೀದಿಗಳನ್ನು ನಿರ್ಮಾಣ ಮಾಡಿದ್ದರು. ಗುಡಿ ಕೈಗಾರಿಕೆ ಜೊತೆಗೆ ಒಕ್ಕಲುತನಕ್ಕೆ ಹೆಚ್ಚು ಪ್ರಾಮುಖ್ಯ ನೀಡಿದ್ದರು. ಆದರೆ ಇಂದು ಕೆರೆಗಳೆಲ್ಲ ಮುಚ್ಚಿಹೋಗಿದೆ ನಗರದಲ್ಲಿ ಒಂದುಕಾಲು ಕೋಟಿ ಜನಸಂಖ್ಯೆ ಇದ್ದು ಜನದಟ್ಟಣೆಯ ನಗರವಾಗಿದೆ. ಇವರ ಹುಟ್ಟುಹಬ್ಬ ಆಚರಿಸಲು 3 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾನು ನೆನಪು ಮಾಡಿಕೊಳ್ಳಬೇಕಾಗಿದೆ ಎಂದರು.

ಕೆಂಪೇಗೌಡರು ಒಕ್ಕಲಿಗ ಮನೆತನದಲ್ಲಿ ಹುಟ್ಟಿ ವ್ಯವಸಾಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ವ್ಯವಸಾಯ ಲಾಭದಾಯಕ ಕಸುಬು ಆಗಿಲ್ಲ. ಸರ್ಕಾರದ ಆರ್ಥಿಕ ಸೌಲಭ್ಯ ಪಡೆದು ಒಕ್ಕಲಿಗರು ಆರ್ಥಿಕ ಸಂಕಷ್ಟದಿಂದ ಹೊರಬರಲು ಅವರು ಕರೆ ನೀಡಿದರು.

ಶಿಕ್ಷಕ ದೊಡ್ಡಿ ಇಂದ್ದುವಾಡಿಯ ಶಿವಣ್ಣನವರು ಕೆಂಪೇಗೌಡರ ಜೀವನ ಚರಿತ್ರೆ ಬಗ್ಗೆ ಸವಿವರವಾದ ಭಾಷಣ ನೀಡಿದರು. ಉದ್ಘಾಟನಾ ಭಾಷಣ ಮಾಡಿದ ಜಿ.ಪಂ ಅಧ್ಯಕ್ಷೆ ಶಿವಮ್ಮ ಕೆಂಪೇಗೌಡ ಜಯಂತಿಗೆ ಶುಭ ಕೋರಿದರು.

ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷ ರಾಜೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣಕುಮಾರ್, ಜಿ.ಪಂ ಸದಸ್ಯ ಕಮಲ್, ಒಕ್ಕಲಿಗ ಸಂಘದ ಅಧ್ಯಕ್ಷ ರಾಜುಗೌಡ, ಶಿವಮಲ್ಲೇಗೌಡ,  ತಹಶೀಲ್ದಾರ್ ಕೆ.ಕುನಾಲ್, ಹನೂರು ತಹಶೀಲ್ದಾರ್ ನಾಗರಾಜಯ್ಯ, ತಾ.ಪಂ ಇಒ ಉಮೇಶ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News