ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-06-28 18:32 GMT

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ದಿ ಇಯಾನ್ ಪ್ಯಾರಿ ಸ್ಕಾಲರ್‌ಶಿಪ್ 2019

 ವಿವರ: ಸ್ವತಂತ್ರವಾಗಿ ಫೋಟೋಗ್ರಫಿ ಯೋಜನೆ ನಿರ್ವಹಿಸುವ ಯುವ ಫೋಟೊಗ್ರಾಫರ್‌ಗಳಿಗೆ ಇಯಾನ್ ಪ್ಯಾರಿ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಅರ್ಜಿದಾರರಿಗೆ ‘ಸಂಡೇ ಟೈಮ್ಸ್ ಅವಾರ್ಡ್ ಫಾರ್ ಅಚೀವ್‌ಮೆಂಟ್’ ಹಾಗೂ ‘ಕ್ಯಾನನ್ ಅವಾರ್ಡ್ ಫಾರ್ ಪೊಟೆನ್ಶಿಯಲ್’ ವ್ಯಾಪ್ತಿಯಡಿ ಬರುವ ಹೆಚ್ಚುವರಿ ಸೌಲಭ್ಯ ಒದಗಿಸಲಾಗುವುದು.
ಅರ್ಹತೆ: ಪೂರ್ಣಾವಧಿಯ ಯಾವುದಾದರೂ ಫೋಟೊಗ್ರಾಫಿಕ್ ಕೋರ್ಸ್‌ಗೆ ಪ್ರವೇಶ ಪಡೆದಿರುವ 24 ವರ್ಷದೊಳಗಿನ ಭಾರತೀಯ ಯುವಕರು ಅರ್ಹರು.
 ನೆರವು: ಆಯ್ಕೆಯಾದವರು 3,500 ಅಮೆರಿಕನ್ ಡಾಲರ್ ಮೊತ್ತದ ಸ್ಕಾಲರ್‌ಶಿಪ್, ಫೋಟೊಗ್ರಫಿ ಸಾಧನ ಖರೀದಿಗೆ ಕ್ಯಾನನ್‌ನಿಂದ ಸಾಲ ಮತ್ತು ಸ್ಕಾಲರ್‌ಶಿಪ್, ಜೂಪ್ ಸ್ವಾರ್ಟ್ ಮಾಸ್ಟರ್‌ಕ್ಲಾಸ್ ನಾಮನಿರ್ದೇಶನಕ್ಕೆ ನೇರ ಪ್ರವೇಶಾವಕಾಶ, ವರ್ಷಾವಧಿಯ ಮಾರ್ಗದರ್ಶಿ ಕಾರ್ಯಕ್ರಮದ ಎಲ್ಲಾ ವೆಚ್ಚ ಪಾವತಿ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 5, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IAP9

**************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ದಿ ಡೆನೀಸ್ ಹೊಲ್ಲಾಂಡ್ ಸ್ಕಾಲರ್‌ಶಿಪ್, ಯುಸಿಎಲ್ 2019

ವಿವರ: ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್(ಯುಸಿಎಲ್)ನಲ್ಲಿ ಪದವಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಂದ ಯುಸಿಎಲ್ ಅರ್ಜಿ ಆಹ್ವಾನಿಸಿದೆ. ಯುಸಿಎಲ್‌ನಲ್ಲಿ 3 ವರ್ಷದ ಅಧ್ಯಯನ ನಡೆಸಲು ಆಸಕ್ತರಾಗಿರುವ, ಆರ್ಥಿಕವಾಗಿ ಹಿಂದುಳಿದವರು ಅರ್ಜಿ ಸಲ್ಲಿಸಬಹುದು.
ಅರ್ಹತೆ: ಕನಿಷ್ಠ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಅರ್ಹರು. ಎಎಂಡಿಟಿ ಸ್ಕೂಲ್ ಆಫ್ ಕ್ರಿಯೇಟಿವ್ ಆಯಾ ಕೋರ್ಸ್‌ಗಳಿಗೆ ನಿಗದಿಗೊಳಿಸಿದ ಪ್ರವೇಶ ಅರ್ಹತೆಯನ್ನು ಹೊಂದಿರಬೇಕು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 9000 ಗ್ರೇಟ್ ಬ್ರಿಟನ್ ಪೌಂಡ್‌ನಂತೆ 3 ವರ್ಷ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 5, 2019
ಅರ್ಜಿ: ಆನ್‌ಲೈನ್‌ನಲ್ಲಿ ಇ ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TDH1
**********

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
  ಇಂಟರ್‌ನ್ಯಾಷನಲ್ ಅಪ್ಲಿಕೆಂಟ್ಸ್ ಸ್ಕಾಲರ್‌ಶಿಪ್ಸ್ ಫಾರ್ ಕಂಪ್ಯೂಟರ್/ಲೈಬ್ರೆರಿ ಮತ್ತು ಮಾಹಿತಿ ವಿಜ್ಞಾನ 2019

ವಿವರ: ಕಂಪ್ಯೂಟರ್ ಸೈಯನ್ಸ್ ಅಥವಾ ಲೈಬ್ರೆರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗೆ ದಾಖಲಾತಿ ಮಾಡಿಕೊಳ್ಳಲು ಹಾಗೂ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿಗಳಿಂದ ಸಿಟಿ, ಲಂಡನ್ ವಿಶ್ವವಿದ್ಯಾನಿಲಯವು ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಸಿಟಿ, ಲಂಡನ್ ವಿವಿಯಲ್ಲಿ ಆಯ್ದ ಕಂಪ್ಯೂಟರ್/ಲೈಬ್ರೆರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದವರು ಒಂದು ಬಾರಿ ನಿಗದಿತ ಸ್ಕಾಲರ್‌ಶಿಪ್ ಮೊತ್ತವಾಗಿ 2,000 ಗ್ರೇಟ್ ಬ್ರಿಟನ್ ಪೌಂಡ್ ಮೊತ್ತ ಪಡೆಯಲಿದ್ದಾರೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 1, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IAS1

*************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
 ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್, ಐಐಪಿಎಸ್ 2019

ವಿವರ: ಜನಸಂಖ್ಯಾ ವಿಜ್ಞಾನ ಹಾಗೂ ಸಂಬಂಧಿತ ವಿಷಯಗಳಲ್ಲಿ ಪೋಸ್ಟ್ ಡಾಕ್ಟೋರಲ್ ಅಧ್ಯಯನ ನಡೆಸಬಯಸುವ ಸಂಶೋಧಕರಿಗೆ ದಿ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸೈಯನ್ಸಸ್(ಐಐಪಿಎಸ್) ನೀಡುವ ಸ್ಕಾಲರ್‌ಶಿಪ್.
ಅರ್ಹತೆ: ಜನಸಂಖ್ಯಾ ವಿಜ್ಞಾನ ಅಥವಾ ಸಂಬಂಧಿತ ವಿಷಯಗಳಾದ ಜನಸಂಖ್ಯೆ, ಆರೋಗ್ಯ, ಲಿಂಗ ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ಪಿಎಚ್‌ಡಿ ಪದವೀಧರರು ಅರ್ಜಿ ಸಲ್ಲಿಸಬಹುದು. 2019ರ ಜೂನ್ 30ಕ್ಕೆ ಅನ್ವಯವಾಗುವಂತೆ 40 ವರ್ಷದ ಕೆಳಗಿರಬೇಕು.
ನೆರವು: ಆಯ್ಕೆಯಾದವರಿಗೆ ಪೋಸ್ಟ್ ಡಾಕ್ಟೋರಲ್ ಅಧ್ಯಯನಕ್ಕೆ ಒಂದು ವರ್ಷಕ್ಕೆ ಮಾಸಿಕ 50,000 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 1, 2019
ಅರ್ಜಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IIP1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News