ನ್ಯೂಝಿಲ್ಯಾಂಡ್ ಸೆಮಿ ಪೈನಲ್‌ಗೆ

Update: 2019-07-05 18:40 GMT

ಲಂಡನ್, ಜು.5: ಬಾಂಗ್ಲಾದೇಶ ತಂಡದ ವಿರುದ್ಧ ಶುಕ್ರವಾರ ವಿಶ್ವಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿಶ್ವದಾಖಲೆಯ ಸವಾಲನ್ನು ಸೇರಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನ ತಂಡ ಸೆಮಿಫೈನಲ್‌ಗೇರುವಲ್ಲಿ ವಿಫಲವಾಗಿದೆ.

 ಪಾಕಿಸ್ತಾನ ತಂಡ ಕೊನೆಯ ಪಂದ್ಯದಲ್ಲಿ ಗರಿಷ್ಠ ರನ್ ದಾಖಲಿಸಿ 316 ರನ್‌ಗಳ ಅಂತರದಲ್ಲಿ ಜಯ ಗಳಿಸಬೇಕಿತ್ತು. ಆದರೆ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 315 ರನ್ ಗಳಿಸಿದೆ.

 ಪಾಕ್ ಸೆಮಿಫೈನಲ್‌ಗೇರಲು ಇಂದು ಬಾಂಗ್ಲಾದೇಶವನ್ನು 7 ರನ್‌ಗಳಿಗೆ ಆಲೌಟ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಬಾಂಗ್ಲಾದೇಶ ತಂಡ ತನ್ನ ಇನಿಂಗ್ಸ್‌ನಲ್ಲಿ 8ರನ್ ಗಳಿಸುತ್ತಿದ್ದಂತೆ ಪಾಕ್ ಪಾಳಯದಲ್ಲಿ ವೌನ ಆವರಿಸಿತು. ಪಾಕ್ ಸೆಮಿಫೈನಲ್‌ಗೇರುವ ದಾರಿ ಬಂದ್ ಆಗಿದೆ. ಉತ್ತಮ ರನ್ ರೇಟ್ ಹೊಂದಿರುವ ನ್ಯೂಝಿಲ್ಯಾಂಡ್ ಶುಕ್ರವಾರ ಆಡದಿದ್ದರೂ, ಆ ತಂಡಕ್ಕೆ ಸೆಮಿಫೈನಲ್ ಹಾದಿಯ ಬಾಗಿಲು ತೆರೆದಿದೆ.

 ಈಗಾಗಲೇ ಆಸ್ಟ್ರೇಲಿಯ, ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದು, ಅಗ್ರ ನಾಲ್ಕರಲ್ಲಿ ನ್ಯೂಝಿಲ್ಯಾಂಡ್ ತನ್ನ ಸ್ಥಾನವನ್ನು ಖಚಿತಪಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News