ಅಸ್ಸಾಂ: ಜೆಇವಿ ರೋಗಕ್ಕೆ ಬಲಿಯಾದವರ ಸಂಖ್ಯೆ 49ಕ್ಕೇರಿಕೆ

Update: 2019-07-06 14:48 GMT

 ಗುವಾಹಟಿ, ಜು.6: ಅಸ್ಸಾಂನಲ್ಲಿ ಡೆಂಗ್, ಹಳದಿ ಜ್ವರದ ಲಕ್ಷಣವಿರುವ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇವಿ) ಸೋಂಕು ರೋಗಕ್ಕೆ ಬಲಿಯಾದವರ ಸಂಖ್ಯೆ 49ಕ್ಕೇರಿದ್ದು ಇನ್ನೂ 190 ಜನರಿಗೆ ಸೋಂಕು ತಗುಲಿದೆ. ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಕೊಕ್ರಜಾರ್ ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಈ ಕಾಯಿಲೆ ವ್ಯಾಪಿಸಿದ್ದು ಸೆಪ್ಟೆಂಬರ್ 30ರವರೆಗೆ ರಜೆಯಲ್ಲಿ ತೆರಳದಂತೆ ಎಲ್ಲಾ ವೈದ್ಯರಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ರಾಜ್ಯದಲ್ಲಿ ಪ್ರತೀ ವರ್ಷ ಜೆಇವಿ ರೋಗದಿಂದ ಸರಾಸರಿ 100 ಜನ ಮರಣ ಹೊಂದುತ್ತಿದ್ದಾರೆ. 2015ರಲ್ಲಿ ಈ ಸಂಖ್ಯೆ 135ಕ್ಕೇರಿತ್ತು, ಆದರೆ ಕಳೆದ ವರ್ಷ 87ಕ್ಕೆ ಇಳಿದಿದೆ. ರಾಜ್ಯದ ಪರಿಸ್ಥಿತಿಯ ಬಗ್ಗೆ ನಿಕಟ ನಿಗಾ ವಹಿಸಿದ್ದೇವೆ. ತಮ್ಮ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಲಾ 1 ಸಾವಿರ ರೂ. ನೀಡಲಾಗುತ್ತದೆ ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ವೆಚ್ಚವನ್ನು ಸರಕಾರ ಭರಿಸುತ್ತದೆ. ವೈದ್ಯರಿಗೆ ತುರ್ತು ರಜೆ ಹೊರತುಪಡಿಸಿ ಉಳಿದೆಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News