ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ವಿಭಜನೆಯಾಗಲಿದೆ: ಡಿ.ವಿ.ಸದಾನಂದಗೌಡ

Update: 2019-07-06 16:24 GMT

ಮೈಸೂರು, ಜು.6: ಅತೃಪ್ತ ಶಾಸಕರ ರಾಜೀನಾಮೆಯನ್ನು ನೋಡಿದರೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ವಿಭಜನೆಯಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದುಗೆ ಮಾತನಾಡಿದ ಅವರು, ಮೈತ್ರಿ ಸರಕಾರದ ಶಾಸಕರ ರಾಜೀನಾಮೆ ಅಚ್ಚರಿ ತಂದಿದೆ. ಆ ಶಾಸಕರ ಹೇಳಿಕೆ ನೋಡಿದರೆ ಸರಕಾರದಲ್ಲಿ ಯಾವ ಮಟ್ಟದ ಅತೃಪ್ತಿ ಇದೆ ಎಂದು ತಿಳಿಯುತ್ತದೆ ಎಂದರು.

ಸರಕಾರ ಪತನವಾದರೆ ಬಿಜೆಪಿ ಬಹಳ ಜವಾಬ್ದಾರಿಯಾಗಿ ಕೆಲಸ ಮಾಡಲಿದೆ. ಒಂದು ವೇಳೆ ಬಿಜೆಪಿ ಸರಕಾರ ರಚನೆಯಾದರೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News