ಮುಂಬೈ: ಭಿನ್ನಮತೀಯ ಶಾಸಕರು ತಂಗಿರುವ ಹೊಟೇಲ್ ಮುಂದೆ ಧರಣಿ

Update: 2019-07-07 17:51 GMT

ಮುಂಬೈ, ಜು.7: ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆನ್ನು ಹಿಂತೆಗೆದು ಕೊಳ್ಳಬೇಕೆಂದು ಕರ್ನಾಟಕದ ಭಿನ್ನಮತೀಯ ಕಾಂಗ್ರೆಸ್ ಶಾಸಕರನ್ನು ಆಗ್ರಹಿಸಿ, ಅವರು ವಾಸ್ತವ್ಯ ಹೂಡಿರುವ ಸೊಫಿಟೆಲ್ ಹೊಟೇಲ್ ಎದುರುಗಡೆ ಮಹಾರಾಷ್ಟ್ರದ ಯುವಕಾಂಗ್ರೆಸ್ ಕಾರ್ಯಕರ್ತರು ರವಿವಾರ ಧರಣಿ ನಡೆಸಿದರು.

ಮಹಾರಾಷ್ಟ್ರ ಯುವಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸೇರಿದಂತೆ ಹಲವಾರು ಧರಣಿ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಧರಣಿಯ ವೇಳೆ ಪ್ರತಿಭಟನಾಕಾರರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಧಾನಸಭೆಯಲ್ಲಿ ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವುದು ಅವರ ಕೆಲಸವಾಗಿದೆ. ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬೇಕೆಂಬುದು ನಮ್ಮ ಬೇಡಿಕೆಯಾಗಿದೆಯೆಂದು ಧರಣಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ತಿಳಸಿದ್ದಾರೆ.

ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆಯೆಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News