ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯ ಬಂಧನ

Update: 2019-07-08 12:06 GMT

ಹನೂರು, ಜು.8: ಸಾಕು ನಾಯಿಗಳ ಸಹಾಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಮಲೆಮಹದೇಶ್ವರ ವನ್ಯ ಜೀವಿ ವಲಯ ವಿಭಾಗದ ಪಿ.ಜಿ.ಪಾಳ್ಯ ಬಫರ್ ನ ಆಂಡಿ ಪಾಳ್ಯ ಗಸ್ತಿನಲ್ಲಿ ನಡೆದಿದೆ.

ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೀರೆಪಾತಿ ಗ್ರಾಮದ ನಿವಾಸಿ ಸುಬ್ರಮಣಿ ಎಂಬವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತ ಆರೋಪಿ ಸಾಕು ನಾಯಿಗಳ ಸಹಾಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಕಡವೆಯೊಂದನ್ನು ಕೊಂದು ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ 30 ಕೆ.ಜಿ. ತೂಕದ ಕಡವೆಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಂಧಿಸುವ ವೇಳೆ ಆರ್‍ಎಫ್‍ಒ ಸಯ್ಯದ್‍ ಸಾಬ್ ನದಾಫ್, ಡಿಆರ್‍ಎಫ್‍ಒ ನವಿನ್‍ ಕುಮಾರ್, ಫಾರೆಸ್ಟ್ ಗಾರ್ಡ್ ರಸೂಲ್ ವಾಲಿಕಾರ್, ವಾಚರ್ಸ್‍ಗಳಾದ ರಂಗಸ್ವಾಮಿ, ಜಡೆಯಪ್ಪ, ಮಾದಪ್ಪ, ಮುರುಗೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News