ಮಕ್ಕಳ ಶಾಲಾ ಬ್ಯಾಗ್ ಭಾರ ಇಳಿಸಲು ಕೋರುವ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Update: 2019-07-08 19:10 GMT

ಮುಂಬೈ,ಜು.8: ಶಾಲಾ ಬ್ಯಾಗುಗಳ ಭಾರವನ್ನು ಕಡಿಮೆಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ಕಾಲಕ್ಕನುಗುಣವಾಗಿ ಶಾಲಾ ಪುಸ್ತಕಗಳ ಗಾತ್ರವು ತೆಳ್ಳಗಾಗಿರುವುದರಿಂದ ಮಕ್ಕಳು ಅನಗತ್ಯವಾಗಿ ಭಾರದ ಚೀಲಗಳನ್ನು ಕೊಂಡೊಯ್ಯುತ್ತಿದ್ದಾರೆಂದು ತಾನು ಭಾವಿಸುವುದಿಲ್ಲವೆಂದು ಅದು ಹೇಳಿದೆ.

ಶಾಲಾ ಬ್ಯಾಗ್‌ಗಳ ಭಾರವನ್ನ ಕಡಿಮೆಗೊಳಿಸಲು ಸರಕಾರಕ್ಕೆ ಯಾವುದೇ ನಿರ್ದೇಶವನ್ನು ನೀಡುವ ಅಗತ್ಯವಿಲ್ಲವೆಂದು ಅದು ಹೇಳಿದೆ.

‘‘ನಮ್ಮ ಕಾಲದಲ್ಲಿ, ನಮ್ಮ ಪಠ್ಯಪುಸ್ತಕಗಳು ತುಂಬಾ ದಪ್ಪಗಿದ್ದವು. ಇದು ಪುಸ್ತಕಗಳು ತುಂಬಾ ತೆಳುವಾಗಿವೆ. ಅವು ಲಿಂಗತಾಟಸ್ಥವನ್ನು ಕೂಡಾ ಹೊಂದಿವೆ. ಪುಸ್ತಕಗಳು ವಿಕಸನಗೊಂಡಿವೆ’’ ಎಂದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸುತ್ತಾ ತಿಳಿಸಿತು.

‘‘ಹಿಂದೆ ನಮ್ಮ ಪುಸ್ತಕಗಳು ಮಹಿಳೆಯರು ಕೇವಲ ಮನೆಗೆಲಸ ಮಾತ್ರ ಮಾಡುತ್ತಾರೆಂಬುಂದಾಗಿ ಬಿಂಬಿಸುತ್ತಿತ್ತು. ಇಂದು ಪುಸ್ತಕಗಳು ಗಂಡಸರು ನೆಲಗುಡಿಸುವುದನ್ನು ತೋರಿಸುತ್ತಿವೆ’’ ಎಂದು ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಜೋಗ್ ಹಾಗೂ ನ್ಯಾಯಮೂರ್ತಿ ಎನ್.ಎಂ. ಜಾಮ್‌ದಾರ್ ಅವರಿದ್ದ ಪೀಠವು ತಿಳಿಸಿದೆ.

‘‘ನಮ್ಮ ಕಾಲದಲ್ಲಿ ಪುಸ್ತಕಗಳು ತುಂಬಾ ಭಾರವಾಗಿದ್ದರೂ, ನಮಗೆ ಬೆನ್ನುನೋವು ಬಂದಿರಲಿಲ್ಲ’’ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News