ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-07-12 18:30 GMT

ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):
ಲಾ’ರೆಲ್ ಇಂಡಿಯಾ ಫಾರ್ ಯಂಗ್ ವುಮೆನ್ ಇನ್ ಸೈಯನ್ಸ್ ಸ್ಕಾಲರ್‌ಶಿಪ್ 2019

ವಿವರ: ಭಾರತದ ಯಾವುದೇ ಅಂಗೀಕೃತ ಸಂಸ್ಥೆಯಲ್ಲಿ, ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಪದವಿ ಅಧ್ಯಯನ ನಡೆಸಬಯಸುವ ಯುವ ಮಹಿಳೆಯರಿಗೆ ನೀಡುವ ಸ್ಕಾಲರ್‌ಶಿಪ್. ವಿಜ್ಞಾನದಲ್ಲಿ ಅಧ್ಯಯನ ನಡೆಸಲು ಹಾಗೂ ವೃತ್ತಿ ಮುಂದುವರಿಸಲು ಬಯಸುವ ಯುವ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಕಾಲರ್‌ಶಿಪ್ ನೀಡಲಾಗುತ್ತದೆ.
ಅರ್ಹತೆ: 2018-19ರ ಶೈಕ್ಷಣಿಕ ವರ್ಷದಲ್ಲಿ ಪಿಸಿಬಿ/ಪಿಸಿಎಂ/ ಪಿಸಿಎಂಬಿಯಲ್ಲಿ ಶೇ.85 ಅಂಕ ಗಳಿಸಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ 19 ವರ್ಷದ ಒಳಗಿನ ವಿದ್ಯಾರ್ಥಿನಿಯರು. ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ನೆರವು: ಬೋಧನಾ ಶುಲ್ಕ ಹಾಗೂ ಶೈಕ್ಷಣಿಕ ವೆಚ್ಚವಾಗಿ 2,50,000 ರೂ. ಮೊತ್ತವನ್ನು ಕಂತಿನ ರೂಪದಲ್ಲಿ ನೀಡಲಾಗುವುದು.
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 15, 2019
ಅರ್ಜಿ: ಆನ್‌ಲೈನ್ ಮೂಲಕ ಅಥವಾ ಅಂಚೆಯಲ್ಲಿ ಅರ್ಜಿ ಸಲ್ಲಿಸಬೇಕು.
L'oreal India, The scholarship cell, c/o Buddy4study, stellar IT park, c-25, Office No.8,9 &10, Tower-A, Ground floor, sector-62, Noida, Uttarpradesh-201301 India
ಜಾಲತಾಣ: http://www.b4s.in/bharati/LIF9

******************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ರಾಮನ್-ಚರ್ಪಕ್ ಫೆಲೋಶಿಪ್ 2019

ವಿವರ: ಶೈಕ್ಷಣಿಕ ವಿನಿಮಯ ಯೋಜನೆಯಡಿ ವಿಜ್ಞಾನದಲ್ಲಿ ಡಾಕ್ಟೋರಲ್ ಅಧ್ಯಯನ ನಡೆಸಲು ಮತ್ತು ಫ್ರಾನ್ಸ್‌ನಲ್ಲಿ ಕಾರ್ಯ ನಿರ್ವಹಿಸಲು ಫೆಲೋಶಿಪ್ ಮತ್ತು ಜೀವನಭತ್ತೆ ಪಡೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತದಲ್ಲಿರುವ ಫ್ರೆಂಚ್ ಇನ್‌ಸ್ಟಿಟ್ಯೂಟ್ ಭಾರತೀಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಮಾನ್ಯತೆ ಪಡೆದ ಫ್ರೆಂಚ್ ಸಂಸ್ಥೆ ಅಥವಾ ವಿವಿಯಲ್ಲಿ ವಿನಿಮಯ ಯೋಜನೆಯಡಿ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಿದವರು/ಆಯ್ಕೆಯಾದವರು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳು 1,500 ಯುರೊ ಮೊತ್ತ, ಫ್ರಾನ್ಸ್ ಗೆ ತೆರಳಲು ಮತ್ತು ಹಿಂದಿರುಗುವ ವಿಮಾನಯಾನ ವೆಚ್ಚ, ಆರೋಗ್ಯ ವಿಮಾ ವೆಚ್ಚ, ಸೆಮಿನಾರ್‌ಗಳಲ್ಲಿ ಭಾಗವಹಿಸುವ ವೆಚ್ಚ, ವೀಸಾ ಅರ್ಜಿಗೆ ಸಂಬಂಧಿಸಿದ ವೆಚ್ಚವನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ:  http://www.b4s.in/bharati/RCF3
**************

ವಿದ್ಯಾರ್ಥಿವೇತನ
(ಅವಶ್ಯಕತೆ ಆಧಾರಿತ):
ಎಸ್‌ಎಚ್‌ಡಿಎಫ್ ಸ್ಕಾಲರ್‌ಶಿಪ್ಸ್ 2019

ವಿವರ: ಸಿಖ್ ಹ್ಯೂಮನ್ ಡೆವಲಪ್‌ಮೆಂಡ್ ಫೌಂಡೇಶನ್(ಎಸ್‌ಎಚ್‌ಡಿಎಫ್) ಮತ್ತು ನಿಶ್ಕಾಮ್ ಸಿಖ್ ವೆಲ್‌ಫೇರ್ ಕೌನ್ಸಿಲ್, ವೃತ್ತಿಪರ ವಿಷಯಗಳಲ್ಲಿ ಉನ್ನತ ಅಧ್ಯಯನ ನಡೆಸುವ ಆಸಕ್ತಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಇತ್ತೀಚಿನ ಎರಡು ಶೈಕ್ಷಣಿಕ ಪರೀಕ್ಷೆಗಳಲ್ಲಿ ಕನಿಷ್ಠ ಶೇ.60 ಅಂಕ ಗಳಿಸಿರುವ ಮತ್ತು ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವೃತ್ತಿಪರ ಅಧ್ಯಯನ ನಡೆಸುವ, ಕುಟುಂಬದ ವರಮಾನ ವರ್ಷಕ್ಕೆ 1.80 ಲಕ್ಷ ರೂ.ಗಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳ ಆರ್ಥಿಕ ಅವಶ್ಯಕತೆ ಹಾಗೂ ಅಗತ್ಯದ ಆಧಾರದಲ್ಲಿ, ಮತ್ತು ಸ್ಕಾಲರ್‌ಶಿಪ್ ಪರೀಕ್ಷೆಯ ಸಾಧನೆಯನ್ನು ಆಧರಿಸಿ ತಲಾ 30 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 27, 2019
ಅರ್ಜಿ: ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/NSW1

***********************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಗ್ಲೋಬಲ್ ಯೂತ್ ವೀಡಿಯೊ ಕಾಂಪಿಟೀಷನ್ 2019

ವಿವರ: ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರಿಂದ, ಹವಾಮಾನ ಬದಲಾವಣೆಯಿಂದ ಗ್ರಹವನ್ನು ರಕ್ಷಿಸುವ ವಿಷಯದಲ್ಲಿ ಸ್ಫೂರ್ತಿದಾಯಕ ವಿಷಯವುಳ್ಳ ಕಿರು ವೀಡಿಯೊ ಸಲ್ಲಿಸಲು ಟಿವಿಇ (ಟೆಲಿವಿಷನ್ ಫಾರ್ ಎನ್‌ವೈರನ್‌ಮೆಂಟ್) ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಲಿದೆ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ ದಲ್ಲಿ ಭಾಗವಹಿಸಲು ಅವಕಾಶ ದೊರಕುತ್ತದೆ.

ಅರ್ಹತೆ: 18ರಿಂದ 30 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವೀಡಿಯೊಗಳು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಹವಾಮಾನ ಸಮ್ಮೇಳನದಲ್ಲಿ ಪ್ರದರ್ಶಿತವಾಗುವ ಅವಕಾಶವಿದೆ. ಅಲ್ಲದೆ ಚಿಲಿಯಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಲಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 28, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/GYV3
*****************
ವಿದ್ಯಾರ್ಥಿವೇತನ
(ಪ್ರತಿಭೆ ಮತ್ತು ಆದಾಯ ಆಧಾರಿತ):
ಯುಜಿಎಎಂ-ಲೆಗ್ರಾಂಡ್ ಸ್ಕಾಲರ್‌ಶಿಪ್ ಪ್ರೋಗ್ರಾಂ-2019

ವಿವರ: ವಿಜ್ಞಾನ ವಿಷಯದಲ್ಲಿ 12ನೇ ತರಗತಿ ತೇರ್ಗಡೆಯಾಗಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಬಿಟೆಕ್/ ಬಿ.ಆರ್ಕ್(ಆರ್ಕಿಟೆಕ್ಟ್) ಅಧ್ಯಯನಕ್ಕೆ 2019ರಲ್ಲಿ ದಾಖಲು ಮಾಡಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
ಅರ್ಹತೆ: ಶೇ. 75 ಅಥವಾ ಅದಕ್ಕಿಂತ ಹೆಚ್ಚು ಸರಾಸರಿ ಅಂಕ ಗಳೊಂದಿಗೆ 10 ಮತ್ತು 12ನೇ ತರಗತಿ ತೇರ್ಗಡೆಯಾಗಿರುವ, ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಬಿಟೆಕ್, ಬಿಇ ಅಥವಾ ಬಿ.ಆರ್ಕ್ ಪದವಿ ಅಧ್ಯಯನ ನಡೆಸಲು ಉದ್ದೇಶಿಸಿರಬೇಕು.
ನೆರವು: ಅರ್ಹ ಅಭ್ಯರ್ಥಿಗಳಿಗೆ ವಾರ್ಷಿಕ 60 ಸಾವಿರ ಅಥವಾ ಶುಲ್ಕದ ಶೇ.60 ಪ್ರಮಾಣದ ಮೊತ್ತ (ಯಾವುದು ಕಡಿಮೆಯೋ ಅದನ್ನು)ವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 25, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/LFL2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News