ಕಾಂಗ್ರೆಸ್ ಶಾಸಕರು ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಧರಣಿ

Update: 2019-07-13 18:48 GMT

ಹಾವೇರಿ, ಜು.13: ಜಿಲ್ಲೆಯ ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲ್ ಸೇರಿದಂತೆ ಅತೃಪ್ತ ಕಾಂಗ್ರೆಸ್ ಶಾಸಕರು, ತಾವು ನೀಡಿರುವ ರಾಜೀನಾಮೆಯನ್ನು ಹಿಂಪಡೆದು ಮರಳಿ ಪಕ್ಷಕ್ಕೆ ಬರುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ರುದ್ರಪ್ಪಲಮಾಣಿ ಹಾಗೂ ಬಸವರಾಜ ಶಿವಣ್ಣ ನೇತೃತ್ವದಲ್ಲಿ ಕಾರ್ಯಕರ್ತರು ನಗರಸಭೆ ಕಚೇರಿಯಿಂದ ಸಿದ್ದಪ್ಪ ವೃತ್ತದವರೆಗೆ ಜಾಥಾ ನಡೆಸಿ, ರಾಜೀನಾಮೆ ಕೊಟ್ಟು ಹೋಗಿರುವ ಪಕ್ಷದ ಶಾಸಕರೆಲ್ಲ ವಾಪಸ್ ಬರಬೇಕು. ಆ ಮೂಲಕ ಮೈತ್ರಿ ಸರಕಾರ ಉಳಿಯಲು ನೆರವಾಗಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನಾಯಕರು ಮತ್ತೆ ಕುದುರೆ ವ್ಯಾಪಾರಕ್ಕಿಳಿದು, ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಹಿಂಬಾಗಿಲ ಮೂಲಕ ಸರಕಾರ ರಚಿಸಲು ಕಸರತ್ತು ನಡೆಸುತ್ತಿದ್ದಾರೆ. ನಮ್ಮ ಶಾಸಕರು ಅದಕ್ಕೆ ಅವಕಾಶ ಕೊಡಬಾರದು. ಆದಷ್ಟು ಬೇಗ ವಾಪಸ್ ಬಂದು, ಐದು ವರ್ಷದ ಆಡಳಿತಾವಧಿ ಪೂರೈಸಬೇಕು. ಕ್ಷೇತ್ರದ ಜನ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಬಸವರಾಜ ಶಿವಣ್ಣ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News