ಬಾಂಗ್ಲಾದ ಮಾಜಿ ಸೇನಾಡಳಿತಗಾರ ಇರ್ಶಾದ್ ಇನ್ನಿಲ್ಲ

Update: 2019-07-14 18:42 GMT

ಢಾಕಾ,ಜು.14: ಬಾಂಗ್ಲಾದೇಶದ ಮಾಜಿ ಸೇನಾಡಳಿತಗಾರ ಹುಸೈನ್ ಮುಹಮ್ಮದ್ ಇರ್ಶಾದ್ ರವಿವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆ ದ ಕೆಲವು ವಾರಗಳಿಂದ ಢಾಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಾಂಗ್ಲಾದೇಶವನ್ನು ಸುಮಾರು ಒಂದು ದಶಕಕ್ಕೂ ಹೆಚ್ಚು ಸಮಯ ಆಳಿದ್ದ ಜನರಲ್ ಇರ್ಷಾದ್‌ರನ್ನು 1990ರಲ್ಲಿ ನಡೆದ ಪ್ರಜಾಪ್ರಭುತ್ವ ಪರ ಬಂಡಾಯದಲ್ಲಿ ಪದಚ್ಯುತ ಗೊಳಿಸಲಾಗಿತ್ತು. ಭ್ರಷ್ಟಾಚಾರದ ಆರೋಪದಲ್ಲಿ ಅವರು ಹಲವು ವರ್ಷಗಳ ಜೈಲುವಾಸ ಅನುಭವಿಸಿದ್ದರು. ಇರ್ಷಾದ್ ಅವರು ವೃದ್ಧಾಪ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದಾಗಿ ಇಂದು ಕೊನೆಯುಸಿರೆಳೆದರೆಂದು ಅವರ ಜಾತಿಯಾ ಪಕ್ಷದ ಸಂಸದ ಹಾಗೂ ದೀರ್ಘಕಾಲದ ಸಹವರ್ತಿ ಖಾಝಿ ಫಿರೋಝ್ ರಶೀದ್ ತಿಳಿಸಿದ್ದಾರೆ.

ಪ್ರತಿಭಾವಂತ ಕವಿಯೂ ಆಗಿದ್ದ ಇರ್ಷಾದ್, 1982ರಲ್ಲಿ ನಡೆದ ರಕ್ತಪಾತ ರಹಿತ ಕ್ರಾಂತಿಯಲ್ಲಿ ಪ್ರಜಾಪ್ರಭುತ್ವವಾದಿ ಸರಕಾರವನ್ನು ಕಿತ್ತೊಗೆದು, ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಅಧಿಕೃತವಾಗಿ ಜಾತ್ಯತೀತ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಬಾಂಗ್ಲಾದಲ್ಲಿ ಅವರ ಆಳ್ವಿಕೆಯಲ್ಲಿ ಇಸ್ಲಾಂನ್ನು ರಾಷ್ಟ್ರೀಯ ಧರ್ಮವೆಂದು ಘೋಷಿಸಲಾಯಿತು.

ತನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ, 1990ರ ದಶಕದಲ್ಲಿ ಅವರ ನೇತೃತ್ವದ ಜಾತಿಯಾ ಪಕ್ಷವು ಬಾಂಗ್ಲಾದ ಮೂರನೆ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ತಲೆಯಿತ್ತು

 ಇರ್ಷಾದ್ ಅವರ ಜಾತಿಯಾ ಪಕ್ಷವು ಹಾಲಿ ಪ್ರಧಾನಿ ಶೇಖ್ ಹಸೀನಾ ವಾಜಿದ್ ಅವರ ಅವಾಮಿ ಲೀಗ್‌ನ ಮುಖ್ಯಮಿತ್ರ ಪಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News