ಗಣಿ ಮುಚ್ಚುಗಡೆ: ವಿದೇಶಿ ಕಂಪೆನಿಗೆ 6 ಶತಕೋಟಿ ಡಾಲರ್ ಪಾವತಿಸಲು ಪಾಕ್‌ಗೆ ವಿಶ್ವಬ್ಯಾಂಕ್ ಆದೇಶ

Update: 2019-07-14 19:09 GMT

ಇಸ್ಲಾಮಾಬಾದ್,ಜು.14: ಪಾಕಿಸ್ತಾನದಲ್ಲಿ 2011ರಲ್ಲಿ ಗಣಿಯನ್ನು ಮುಚ್ಚಿದ್ದಕ್ಕಾಗಿ ಉಂಟಾದ ನಷ್ಟಕ್ಕಾಗಿ ವಿದೇಶಿ ಮೂಲದ ಗಣಿ ಕಂಪೆನಿಗೆ 6 ಶತಕೋಟಿ ಡಾಲರ್ ಪಾಕ್ ಸರಕಾರ ಪಾವತಿಸಬೇಕಾಗಿದೆಯೆಂದು ವಿಶ್ವಬ್ಯಾಂಕ್ ರವಿವಾರ ಘೋಷಿಸಿದೆ. ಕೆನಡ ಮೂಲದ ಚಿನ್ನದ ಗಣಿ ಕಂಪೆನಿ ಬ್ಯಾರಿಕ್ ಹಾಗೂ ಚಿಲಿ ಮೂಲದ ‘ಅಂಟೊಫಾಗಾಸ್ಟಾ ಮಿನೆರಲ್ಸ್’ಗಳ ಒಕ್ಕೂಟ ತೆಥಿಯಾನ್ ಕಾಪರ್ ಕಂಪೆನಿಯಲ್ಲಿ ಶೇ.37.5ರಷ್ಟು ಹೂಡಿಕೆಯನ್ನು ಹೊಂದಿದ್ದವು. ಸುಮಾರು ದಶಕಗಳ ಹಿಂದೆ ಈ ಕಂಪೆನಿ ಸಮೂಹವು ಬಲೂಚಿಸ್ತಾನದ ಪ್ರಾಂತದ ರೆಕೊದಿಕ್‌ನಲ್ಲಿ ಅಪಾರ ಪ್ರಮಾಣದ ಚಿನ್ನ ಹಾಗೂ ತಾಮ್ರದ ನಿಕ್ಷೇಪಗಳನ್ನು ಪತ್ತೆ ಹಚ್ಚಿತ್ತು ಹಾಗೂ ಅಲ್ಲಿ ಭಾರೀ ಲಾಭದಾಯಕವಾದ ತೆರೆದ ಗಣಿಗಳನ್ನು ತೆರೆದಿದ್ದವು. ಆದರೆ ಆದರೆ ಸ್ಥಳೀಯ ಸರಕಾರವು ಈ ಉದ್ಯಮಸಮೂಹದ ಲೀಸ್ ನವೀಕರಿಸಲು ನಿರಾಕರಿಸಿತ್ತು ಹಾಗೂ 2013ರಲ್ಲಿ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಗುತ್ತಿಗೆಯನ್ನು ಅಸಿಂಧುವೆಂದು ಘೋಷಿಸಿತ್ತು.

ಇದೀಗ ಶುಕ್ರವಾರ ವಿಶ್ವಬ್ಯಾಂಕ್‌ನ ಅಂತಾರಾಷ್ಟ್ರೀಯ ವ್ಯಾಜ್ಯಗಳ ಮಧ್ಯಸ್ಥಿಕೆ ಸಮಿತಿಯು ನೀಡಿದ ತೀರ್ಪಿನಲ್ಲಿ ತೆಥಿಯಾನ್ ಕಂಪೆನಿಗೆ 5.84 ಶತಕೋಟಿ ಡಾಲರ್ ನಷ್ಟವನ್ನು ನೀಡುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News