ಚರಂಡಿಗೆ ಬಿದ್ದು 7 ವರ್ಷದ ಬಾಲಕ ಮೃತ್ಯು: ವಾರದಲ್ಲಿ 3ನೆ ಘಟನೆ

Update: 2019-07-15 13:58 GMT

ಮುಂಬೈ, ಜು.15: ತೆರೆದ ಚರಂಡಿಯೊಂದಕ್ಕೆ ಬಿದ್ದು 7 ವರ್ಷ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬೈಯ ಧಾರಾವಿಯಲ್ಲಿ ನಡೆದಿದೆ. ಧಾರಾವಿಯ ರಾಜೀವ್ ಗಾಂಧಿ ಕಾಲನಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಬಾಲಕನನ್ನು ಚರಂಡಿಯಿಂದ ಮೇಲಕ್ಕೆತ್ತಿತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಎ ಸಾಗಿಸಲಾಯಿತಾದರೂ ಬಾಲಕ ಅದಾಗಲೇ ಮೃತಪಟ್ಟಿದ್ದ. ಇದು ಈ ವಾರದಲ್ಲಿ ನಡೆಯುತ್ತಿರುವ ಮೂರನೆ ಘಟನೆಯಾಗಿದೆ.

ಕಳೆದ ಬುಧವಾರ 2 ವರ್ಷದ ಬಾಲಕ ಚರಂಡಿಗೆ ಬಿದ್ದು, ಶನಿವಾರ 12 ವರ್ಷದ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News