ವಿಮಾನ ಪತನ; 9 ಸಾವು

Update: 2019-07-15 16:11 GMT

ಸ್ಟಾಕ್‌ಹೋಮ್ (ಸ್ವೀಡನ್), ಜು. 15: ಉತ್ತರ ಸ್ವೀಡನ್‌ನ ಸಣ್ಣ ಪಟ್ಟಣ ಉಮಿಯ ಸಮೀಪ ಸ್ಕೈಡೈವಿಂಗ್ ವೇಳೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ಯಾರಾಚೂಟ್‌ಧಾರಿಗಳನ್ನು ಒಯ್ಯುತ್ತಿದ್ದ ಸಣ್ಣ ವಿಮಾನವು ಉಮಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನ ಬಳಿಕ ಉಮಿ ನದಿಯಲ್ಲಿರುವ ದ್ವೀಪವೊಂದರಲ್ಲಿ ಪತನಗೊಂಡಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು. ಮೃತಪಟ್ಟವರೆಲ್ಲರೂ ಸ್ವೀಡನ್ ಪ್ರಜೆಗಳಾಗಿದ್ದಾರೆ. ವಿಮಾನವು ಅವರನ್ನು ಸ್ಕೈಡೈವಿಂಗ್‌ಗಾಗಿ ಆಕಾಶಕ್ಕೆ ಹೊತ್ತೊಯ್ಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News