‘ಮೈ ಲಾರ್ಡ್’ ಪದ ಬಳಸದಂತೆ ವಕೀಲರಿಗೆ ಸೂಚಿಸಿದ ಹೈಕೋರ್ಟ್!

Update: 2019-07-15 17:15 GMT

ಜೈಪುರ, ಜು.15: ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ನ್ಯಾಯಾಧೀಶರನ್ನುದ್ದೇಶಿಸಿ ‘ಮೈ ಲಾರ್ಡ್, ಯುವರ್ ಲಾರ್ಡ್‌ಶಿಪ್’ ಮುಂತಾದ ಪದಗಳನ್ನು ಬಳಸದಂತೆ ರಾಜಸ್ತಾನ ಹೈಕೋರ್ಟ್ ನ್ಯಾಯವಾದಿಗಳಿಗೆ ಸೂಚಿಸಿದೆ.

ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಸಮಾನತೆಯ ಆದೇಶವನ್ನು ಗೌರವಿಸುವ ನಿಟ್ಟಿನಲ್ಲಿ ಜುಲೈ 14ರಂದು ನಡೆದ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದ್ದು, ಗೌರವಾನ್ವಿತ ನ್ಯಾಯಾಧೀಶರನ್ನು ಸಂಬೋಧಿಸುವಾಗ ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಪದ ಬಳಸಬಾರದು ಎಂದು ರಾಜಸ್ತಾನದ ಹೈಕೋರ್ಟ್ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

2014ರಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಧೀಶರನ್ನು ಗೌರವ ಪೂರ್ವಕವಾಗಿ ಸಂಬೋಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಅರ್ಜಿಯಲ್ಲಿ ‘ಮೈ ಲಾರ್ಡ್ ಅಥವಾ ಯುವರ್ ಲಾರ್ಡ್‌ಶಿಪ್’ ಎಂಬ ಉಲ್ಲೇಖವನ್ನು ಕಡ್ಡಾಯಗೊಳಿಸಿಲ್ಲ. ನಮ್ಮನ್ನು ಗೌರವಪೂರ್ವಕವಾಗಿ ಸಂಬೋಧಿಸಬೇಕೆಂಬುದಷ್ಟೇ ನಮ್ಮ ಆಶಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಚ್‌ಎಲ್ ದತ್ತು ಮತ್ತು ಎಸ್‌ಎ ಬೊಬ್ಡೆ ಅವರಿದ್ದ ನ್ಯಾಯಪೀಠ ತಿಳಿಸಿದೆ. ವಸಾಹತುಶಾಹಿ ಅವಧಿಯ ಪಳೆಯುಳಿಕೆಯಾಗಿರುವ ಪದಗಳನ್ನು ಬಳಸುವುದನ್ನು ನಿಷೇಧಿಸಿ ಬಾರ್ ಕೌನ್ಸಿಲ್ 2006ರಲ್ಲಿ ನಿರ್ಣಯವನ್ನು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News