ಬಿಜೆಪಿ ಸೇರಲು ಹಲವರು ಕಾಯುತ್ತಿದ್ದಾರೆ: ಸಂಸದ ಮುನಿಸ್ವಾಮಿ

Update: 2019-07-15 17:20 GMT

ಬೆಂಗಳೂರು, ಜು.15: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಸ್ಪಷ್ಟವಾದ ಬಹುಮತ ನೀಡದೇ ಜನರು ತಿರಸ್ಕರಿಸಿದ್ದರು. ಯಾರಿಗೆ ಬಹುಮತವಿತ್ತೋ ಅವರಿಗೆ ಸರಕಾರ ರಚನೆಗೆ ಅವಕಾಶ ನೀಡಬೇಕಿತ್ತು ಎಂದು ಕೋಲಾರದ ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್ ನಾಯಕರು ಹಿಂಬಾಗಿಲಿನಿಂದ ಬಂದು ಸರಕಾರ ರಚನೆ ಮಾಡಿದ್ದಾರೆ. ಇದೊಂದು ಅಪವಿತ್ರ ಮೈತ್ರಿಯಾಗಿದ್ದು, ಇದೀಗ ಅದೂ ನುಚ್ಚು ನೂರಾಗಿದೆ. ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರ ನಡುವೆ ಜಗಳ ಮಾಡಿಕೊಂಡು ಹೊರ ಹೋಗಿದ್ದಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರಕಾರದ ನಾಯಕರಿಗೆ ಸರಕಾರ ಮುನ್ನಡೆಸಲು ಸಾಧ್ಯವಿಲ್ಲ ಎಂದರೆ ಬಿಟ್ಟುಕೊಡಲಿ, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪಗೆ ಸರಕಾರ ನಡೆಸುವ ಸಾಮರ್ಥ್ಯವಿದೆ. ಸರಕಾರ ರಚಿಸುವ ಅವಕಾಶ ಅದಾಗಿಯೇ ಹುಡುಕಿಕೊಂಡು ಬಂದರೆ ನಾವು ಖಂಡಿತವಾಗಿ ಸರಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು.

ಮೋದಿ ಮತ್ತು ಅಮಿತ್ ಶಾ ಅವರ ಆಡಳಿತ ವೈಖರಿ ನೋಡಿ ನಮ್ಮ ಪಕ್ಷ ಸೇರಲು ಹಲವಾರು ಜನ ಕಾಯುತ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಮಂದಿ ಕಾಯುತ್ತಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಿ, ಬಿಜೆಪಿ ಮತ್ತು ಯಡಿಯೂರಪ್ಪಗೆ ಕೊಡುಗೆ ಕೊಡುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News