ಸಾಂಸ್ಕೃತಿಕ ನಗರಿಯಲ್ಲಿ ಪುರಾತನ ಕಾಲದ ಎರಡು ನಂದಿ ವಿಗ್ರಹಗಳು ಪತ್ತೆ

Update: 2019-07-15 18:03 GMT

ಮೈಸೂರು,ಜು.15: ಸಾಂಸ್ಕೃತಿಕ ನಗರಿ ಮೈಸೂರಿನ ಗ್ರಾಮವೊಂದರಲ್ಲಿ ಪುರಾತನ ಕಾಲದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿವೆ.

ಮೈಸೂರು ಜಿಲ್ಲೆ ಅರಸನ ಕೆರೆ ಗ್ರಾಮದ ಜಮೀನಿನಲ್ಲಿ ಸುಮಾರು 12 ಅಡಿ ಆಳದಲ್ಲಿ ಎರಡು ಬೃಹತ್ ಆದ ನಂದಿ ವಿಗ್ರಹಗಳು ಕಾಣಿಸಿಕೊಂಡಿವೆ. ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ಯಂತ ದೊಡ್ಡದಾದ ನಂದಿಗಳು ಕಾಣಿಸಿರುವುದು ಅರಸನ ಕೆರೆ ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.

ಸುಮಾರು ನಲವತ್ತೈದು ವರ್ಷಗಳ ಹಿಂದೆಯೇ ಈ ವಿಗ್ರಹಗಳ ಕುರುಹು ಸಿಕ್ಕಿದ್ದು, ಗ್ರಾಮಸ್ಥರೆಲ್ಲರೂ ಸೇರಿ ಭೂಮಿಯಲ್ಲಿ ಅಡಗಿದ್ದ ನಂದಿ ವಿಗ್ರಹಗಳನ್ನು ಹೊರ ತೆಗೆಯುವ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ದೊಡ್ಡದಾದ ಹಳ್ಳದಲ್ಲಿ ಅರ್ಧಂಬರ್ಧ ಸಿಕ್ಕಿರುವ ಈ ನಂದಿ ವಿಗ್ರಹಗಳಿಗೆ 40 ವರ್ಷದಿಂದ ಇಲ್ಲಿನ ಗ್ರಾಮಸ್ಥರು ಪೂಜೆ ಮಾಡುತ್ತ ಬಂದಿದ್ದಾರೆ. ಅಷ್ಟು ವರ್ಷಗಳೇ ಕಳೆದರೂ ಅದರ ಇತಿಹಾಸ ಏನೆಂಬುದು ತಿಳಿದಿಲ್ಲ ಎನ್ನುವುದೇ ಸೋಜಿಗದ ಸಂಗತಿ. ಮಾಹಿತಿಯ ಕೊರತೆಯಿಂದಾಗಿ ಪುರಾತತ್ವ ಇಲಾಖೆಯು ಇದರ ಬಗ್ಗೆ ಗಮನಹರಿಸಿಲ್ಲ ಎನ್ನುವುದು ಕೂಡ ದುರಂತ. 

ಮೈಸೂರು ಜಿಲ್ಲೆಯ ಅರಸನ ಕೆರೆ ಗ್ರಾಮದಲ್ಲಿ ಈ ವಿಗ್ರಹಗಳು ದೊಡ್ಡ ಹಳ್ಳದಲ್ಲಿ ಪತ್ತೆಯಾಗಿದ್ದು, ಇದರ ಜೊತೆಗೆ ಸುಮಾರು ಹತ್ತರಿಂದ ಹದಿನೈದು ಬೇರೆ ಬೇರೆ ವಿಗ್ರಹಗಳು ಪತ್ತೆಯಾಗಿವೆ. ನಲ್ವತ್ತು ವರ್ಷಗಳಿಂದ ಆಳವಾದ ಕಂದಕದಲ್ಲಿ ಕಾಣಿಸಿರುವ ವಿಗ್ರಹಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಮಳೆ ಬಂದಾಗ ನಂದಿ ವಿಗ್ರಹಗಳು ಸಂಪೂರ್ಣ ಮಣ್ಣೀನಲ್ಲಿ ಮುಚ್ಚಿಹೋಗುತ್ತವೆ. ಈ ಜಾಗಕ್ಕೆ ಮಹರಾಜ ಚಾಮರಾಜ ಒಡೆಯರ್ ಭೇಟಿ ನೀಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News