ವಾದ ಮುಂದುವರಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ

Update: 2019-07-16 09:08 GMT

ಹೊಸದಿಲ್ಲಿ, ಜು. 16: ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಭೋಜನ ವಿರಾಮದ ಬಳಿಕ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮುಂದುವರಿಸಿದ ಸ್ಪೀಕರ್ ಪರ  ವಕೀಲ ಅಭಿಷೇಕ್ ಮನು ಸಿಂಘ್ವಿ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿದರು.

ರಾಜೀನಾಮೆ ಮತ್ತು ಅನರ್ಹತೆ ಪ್ರಕರಣವನ್ನು ಆದಷ್ಟು ಬೇಗ ಮುಗಿಸಲಿದ್ದೇವೆ.ಎಂದು ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

2018ರಲ್ಲಿ ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದಾಗ ಅಸೆಂಬ್ಲಿ ಮತ್ತು ಸ್ಪೀಕರ್ ಇರಲಿಲ್ಲ. ಸ್ಪೀಕರ್​​ ಇರುವಾಗ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು ಎಂದ​ ಸಿಂಘ್ವಿ ವಾದ ಮಂಡಿಸಿದರು.

ಮುಕುಲ್ ರೋಹಟಗಿ ಒಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ನೀವು (ಸಿಂಘ್ವಿ) ಒಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದೀರಿ. ಒಟ್ಟಿನಲ್ಲಿ ಇದೋಂಥರಾ ಪೊಲಿಟಿಕಲ್ ಗೇಮ್ ಎನಿಸುತ್ತಿದೆ  ಎಂದು ಸಿಜೆಐ ಅಭಿಪ್ರಾಯಪಟ್ಟರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News