ಜು.22ರ ಮಧ್ಯಾಹ್ನ 2:43ಕ್ಕೆ ಚಂದ್ರಯಾನ-2 ಉಡ್ಡಯನ

Update: 2019-07-18 16:01 GMT

IIIಬೆಂಗಳೂರು,ಜು.18: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಉಡಾವಣೆ ಈಗ ಜುಲೈ 22ರಂದು ಮಧ್ಯಾಹ್ನ 2:43ಕ್ಕೆ ನಡೆಯಲಿದೆ ಎಂದು ಇಸ್ರೋ ಗುರುವಾರ ತಿಳಿಸಿದೆ. ಜು.15ರಂದು ನಡೆಯಬೇಕಾಗಿದ್ದ ಚಂದ್ರಯಾನ-2ರ ಉಡಾವಣೆಯು ಜಿಎಸ್‌ಎಲ್‌ವಿ-ಮಾರ್ಕ್  ರಾಕೆಟ್‌ನಲ್ಲಿಯ ತಾಂತ್ರಿಕ ದೋಷದಿಂದಾಗಿ ರದ್ದುಗೊಂಡಿತ್ತು.

III ಅತ್ಯಂತ ಶಕ್ತಿಶಾಲಿ ಜಿಎಸ್‌ಎಲ್‌ವಿ-ಮಾರ್ಕ್ ‘ಬಾಹುಬಲಿ’ ರಾಕೆಟ್‌ನ ಬೆನ್ನೇರಿ ನಭಕ್ಕೆ ಜಿಗಿಯಲಿರುವ ಚಂದ್ರಯಾನ-2 ಕೋಟ್ಯಂತರ ಕನಸುಗಳನ್ನು ಚಂದ್ರನಲ್ಲಿಗೆ ಒಯ್ಯಲು ಸಜ್ಜಾಗಿದೆ ಎಂದು ಇಸ್ರೋ ಟ್ವೀಟಿಸಿದೆ.

ಜು.15ರಂದು ನಸುಕಿನ 2:51ಕ್ಕೆ ಶ್ರೀಹರಿಕೋಟಾದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಯಾನ ಕೈಗೊಳ್ಳಬೇಕಿದ್ದ 976 ಕೋ.ರೂ.ವೆಚ್ಚದ ಚಂದ್ರಯಾನ-2ನ್ನು ರಾಕೆಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಬಳಿಕ ಉಡಾವಣೆಗೆ ಕೇವಲ 56 ನಿಮಿಷಗಳು ಮತ್ತು 24 ಸೆಕೆಂಡ್‌ಗಳು ಬಾಕಿಯಿರುವಾಗ ನಸುಕಿನ 1.55ಕ್ಕೆ ರದ್ದುಗೊಳಿಸಲಾಗಿತ್ತು.

ತನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ತನ್ನಲ್ಲಿ ವಿಶ್ವಾಸವಿರಿಸಿದ್ದಕ್ಕಾಗಿ ಸಾರ್ವಜನಿಕರಿಗೆ ಇಸ್ರೋ ಕೃತಜ್ಞತೆಗಳನ್ನು ಸಲ್ಲಿಸಿದೆ.

ರಾಕೆಟ್‌ನ ದೇಶಿನಿರ್ಮಿತ ಮೇಲಿನ ಹಂತದ ಕೃಯೊಜನಿಕ್ ಇಂಜಿನ್‌ನಲ್ಲಿ ಇಂಧನವನ್ನು ತುಂಬುತ್ತಿದ್ದಾಗ ತಾಂತ್ರಿಕ ದೋಷವು ಪತ್ತೆಯಾಗಿತ್ತು.

ಅವಸರ ಪಟ್ಟು ದೊಡ್ಡ ಅವಘಡಕ್ಕೆ ಅವಕಾಶ ಕಲ್ಪಿಸುವುದಕ್ಕಿಂತ ಉಡಾವಣೆಯನ್ನು ರದ್ದುಗೊಳಿಸಿದ್ದಕ್ಕಾಗಿ ಇಸ್ರೋವನ್ನು ಪ್ರಶಂಸಿಸಲೇಬೇಕು ಎಂದು ಹಲವಾರು ಬಾಹ್ಯಾಕಾಶ ವಿಜ್ಞಾನಿಳು ಹೇಳಿದ್ದರು.

ಈ ಹಿಂದೆ ಜನವರಿ ಮೊದಲ ವಾರಕ್ಕೆ ನಿಗದಿಗೊಳಿಸಲಾಗಿದ್ದ ಚಂದ್ರಯಾನ-2ನ್ನು ಬಳಿಕ ಇಸ್ರೋ ಜು.15ಕ್ಕೆ ಮರುನಿಗದಿಗೊಳಿಸಿತ್ತು. ಮೊದಲ ಚಂದ್ರಯಾನದ 11 ವರ್ಷಗಳ ನಂತರದ ಚಂದ್ರಯಾನ-2 ಈವರೆಗೂ ಯಾವುದೇ ದೇಶವು ಅನ್ವೇಷಿಸದ ಚಂದ್ರನ ಕತ್ತಲೆಯ ಸಾಮ್ರಾಜ್ಯವಾದ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ಲ್ಯಾಂಡರ್ ಮತ್ತು ರೋವರ್‌ನ್ನು ಇಳಿಸಲಿತ್ತು. 3,400 ಬಾರಿ ಚಂದ್ರನ ಕಕ್ಷೆಯ ಸುತ್ತ ಪ್ರದಕ್ಷಿಣೆ ಹಾಕಿದ್ದ ಚಂದ್ರಯಾನ-1 2009,ಆ.29ರವರೆಗೆ 312 ದಿನಗಳ ಕಾಲ ಕಾರ್ಯ ನಿರ್ವಹಿಸಿತ್ತು. 3850 ಕೆ.ಜಿ.ತೂಕದ ಚಂದ್ರಯಾನ -2 ಆರ್ಬಿಟರ್,ಲ್ಯಾಂಡರ್ ಮತ್ತು ರೋವರ್‌ನ್ನು ಒಳಗೊಂಡಿದೆ.

ಚಂದ್ರಯಾನ -2 ತನ್ನ ನಿಗದಿತ ಗುರಿಯನನ್ನು ಸಾಧಿಸಲು 54 ದಿನಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಿದೆ.

ಇಸ್ರೋದ ಈವರೆಗಿನ ಅತ್ಯಂತ ಸಂಕೀರ್ಣ ಮತ್ತು ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮವೆಂದು ಬಣ್ಣಿಸಲಾಗಿರುವ ಚಂದ್ರಯಾನ-2 ರಷ್ಯಾ,ಅಮೆರಿಕ ಮತ್ತು ಚೀನಾಗಳ ನಂತರ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತವನ್ನು ಪಾತ್ರವಾಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News