ಭಾರತದ ಅರ್ಜುನ್ ಭಾಟಿಗೆ ಪ್ರಶಸ್ತಿ

Update: 2019-07-18 18:39 GMT

ಹೊಸದಿಲ್ಲಿ, ಜು.18: ಭಾರತದ ಅರ್ಜುನ್ ಭಾಟಿ ತೈವಾನ್‌ನ ಜೆರೆಮಿ ಚೆನ್‌ರನ್ನು ಮಣಿಸಿ ಕ್ಯಾಲಿಫೋನಿಯಾದ ಪಾಮ್ ಡೆಸರ್ಟ್ ನಲ್ಲಿ ನಡೆದ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಟ್ರೋಫಿ ಜಯಿಸಿದ್ದಾರೆ.

ಟೂರ್ನಮೆಂಟ್‌ನಲ್ಲಿ 40 ದೇಶಗಳ 637 ಗಾಲ್ಫರ್‌ಗಳು ಭಾಗವಹಿಸಿದ್ದಾರೆ.

ಮೂರು ದಿನಗಳ ಫೈನಲ್‌ನಲ್ಲಿ 14ರ ಹರೆಯದ ಅರ್ಜುನ್ ಒಟ್ಟು 199 ಸ್ಟ್ರೋಕ್ಸ್ ಗಳನ್ನು ಗಳಿಸಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಕ್ರಮವಾಗಿ 202 ಹಾಗೂ 207 ಸ್ಟ್ರೋಕ್‌ಗಳನ್ನು ಗಳಿಸಿದ ಚೆನ್ ಹಾಗೂ ನ್ಯೂಝಿಲ್ಯಾಂಡ್‌ನ ಜೊಶುಯಾ ಬೈ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.

13-18 ವಯೋಮಿತಿಯ ವಿಭಾಗದಲ್ಲಿ ಅರ್ಜುನ್ ಶ್ರೇಷ್ಠ ಸ್ಕೋರ್ ಗಳಿಸಿದರು. ‘‘ನಾನು ನನಗೆ ಸಾಧ್ಯವಿರುವ ಉತ್ತಮ ಪ್ರದರ್ಶನ ನೀಡಿದ್ದು, ನನ್ನ ಗೇಮ್‌ನ್ನು ಆಡಿದ್ದೇನೆ. ನನ್ನ ದೇಶಕ್ಕಾಗಿ ಈ ಚಾಂಪಿಯನ್‌ಶಿಪ್‌ನ್ನು ಗೆಲ್ಲಲು ಬಯಸಿದ್ದೆ. ವಿಶ್ವದಲ್ಲೇ ನಂ.1 ಗಾಲ್ಫರ್ ಆಗಲು ಬಯಸಿದ್ದೇನೆ. ಭಾರತದ ಪರ ಒಲಿಂಪಿಕ್ಸ್ ಚಿನ್ನ ಜಯಿಸುವುದು ನನ್ನ ಮುಂದಿರುವ ಗುರಿ’’ ಎಂದು ಗ್ರೇಟರ್ ನೊಯ್ಡ್‌ದ ಗ್ರೇಟರ್ ವ್ಯಾಲಿ ಸ್ಕೂಲ್‌ನ ವಿದ್ಯಾರ್ಥಿ ಅರ್ಜುನ್ ಪ್ರತಿಕ್ರಿಯೆ ನೀಡಿದರು. ಅರ್ಜುನ್ ಏಳು ವರ್ಷಗಳಿಂದ ಗಾಲ್ಫ್ ಆಡುತ್ತಿದ್ದಾರೆ. ಈ ತನಕ ಅವರು ಒಟ್ಟು 150 ಟೂರ್ನಮೆಂಟ್‌ಗಳನ್ನು ಆಡಿದ್ದು, ಈ ಪೈಕಿ 110ರಲ್ಲಿ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News