ಮೈಸೂರು ಡಿಸಿಪಿ ಯಾಗಿ ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Update: 2019-07-18 18:54 GMT

ಮೈಸೂರು, ಜು.18: ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಯಾಗಿ ಬಿ.ಟಿ.ಕವಿತಾ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.

ಸರಕಾರದ ಅಸ್ಥಿರತೆಯ ಭೀತಿ ಒಂದುಕಡೆಯಾದರೆ, ಮೂರನೇ ಆಷಾಢ ಶುಕ್ರವಾರದ ಹಿನ್ನಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಣಕ್ಕೆ ತಂದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಹಿನ್ನಲೆಯಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಗುಪ್ತಚರ ಇಲಾಖೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಇವರನ್ನು ಬುಧವಾರ ಮೈಸೂರು ನಗರದ ಡಿಸಿಪಿ ಯಾಗಿ ವರ್ಗಾವಣೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News