ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-07-19 18:37 GMT

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):
ಕಾನೂನು ವಿದ್ಯಾರ್ಥಿಗಳಿಗೆ ಜಿಇವಿ ಮೆಮೋರಿಯಲ್ ಮೆರಿಟ್ ಸ್ಕಾಲರ್‌ಶಿಪ್ 2019

ವಿವರ: ದೇಶದ ಪ್ರಮುಖ ಕಾನೂನು ಸಂಸ್ಥೆಗಳಲ್ಲಿ ಕಾನೂನು ಪದವಿ ಅಧ್ಯಯನಕ್ಕೆ ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಡಾ ಗೂಲಮ್ ಇ ವಹನ್ವತಿ ಸ್ಕಾಲರ್‌ಶಿಪ್ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್. ದೇಶದ ಪ್ರಮುಖ ನ್ಯಾಯಾಂಗ ತಜ್ಞರಿಂದ ಮಾರ್ಗದರ್ಶನ ಪಡೆಯುವ ಅವಕಾಶವೂ ಲಭಿಸಲಿದೆ.
ಅರ್ಹತೆ: ಭಾರತದ ಪ್ರಮುಖ ಕಾನೂನು ಸಂಸ್ಥೆಗಳಲ್ಲಿ ಎಲ್‌ಎಲ್‌ಬಿ/ಎಲ್‌ಎಲ್‌ಎಂ ಪದವಿ ಅಧ್ಯಯನ ನಡೆಸುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. 2019ರಲ್ಲಿ ಸಿಎಲ್‌ಎಟಿ, ಎಲ್‌ಸ್ಯಾಟ್-ಇಂಡಿಯಾ, ಎಐಎಲ್‌ಇಟಿ ಅಥವಾ ಇತರ ಯಾವುದೇ ಕಾನೂನು ಪ್ರವೇಶ ಪರೀಕ್ಷೆ ತೇರ್ಗಡೆಯಾದವರು ಅರ್ಹರು. ಕುಟುಂಬದ ವಾರ್ಷಿಕ ವರಮಾನ 10 ಲಕ್ಷ ರೂ.ಗಿಂತ ಹೆಚ್ಚಿಗಿರಬಾರದು ಮತ್ತು 10 ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿರಬೇಕು.
ನೆರವು: ಅರ್ಹ ಅಭ್ಯರ್ಥಿಗಳಿಗೆ ವರ್ಷಕ್ಕೆ 50 ಸಾವಿರ ರೂ.ನಿಂದ 2 ಲಕ್ಷ ರೂ. ಮೊತ್ತದವರೆಗಿನ ಸ್ಕಾಲರ್‌ಶಿಪ್ ನೀಡಲಾಗುವುದು. ಅಲ್ಲದೆ ತರಬೇತಿ ಹಾಗೂ ಮಾರ್ಗದರ್ಶನ ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/GMM2

*******************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಜೆಬಿಎನ್‌ಎಸ್‌ಟಿಎಸ್ ಜ್ಯೂನಿಯರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019

ವಿವರ: ಜಗದೀಶ್ ಬೋಸ್ ನ್ಯಾಷನಲ್ ಸೈಯನ್ಸ್ ಟ್ಯಾಲೆಂಟ್ ಸರ್ಚ್(ಜೆಬಿಎನ್‌ಎಸ್‌ಟಿಎಸ್) ಪ್ರೋಗ್ರಾಂನಡಿ ವಿಜ್ಞಾನದಲ್ಲಿ ಪಿಯುಸಿ ಶಿಕ್ಷಣ ಪಡೆಯಲು ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‌ಶಿಪ್.ವಿಜ್ಞಾನ ಅಧ್ಯಯನದಲ್ಲಿ ಆಸಕ್ತಿ ಇರುವ ಸೃಜನಶೀಲ ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದ ಸ್ಕಾಲರ್‌ಶಿಪ್.
ಅರ್ಹತೆ: 2018-19ರ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಅಥವಾ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ.75 ಅಂಕಗಳಿಸಿ ತೇರ್ಗಡೆಯಾಗಿದ್ದು ಈಗ ಪಶ್ಚಿಮ ಬಂಗಾಳದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವಿಜ್ಞಾನದಲ್ಲಿ 11ನೇ ತರಗತಿಗೆ ನೋಂದಣಿಗೊಂಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ 1 ಸಾವಿರ ರೂ.ನಂತೆ 2 ವರ್ಷ ಹಾಗೂ ಪುಸ್ತಕ ಅನುದಾನವಾಗಿ ತಿಂಗಳಿಗೆ 2,500 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/JBN2

************************
ವಿದ್ಯಾರ್ಥಿವೇತನ
 (ಅರ್ಹತೆ ಮತ್ತು ಆದಾಯ ಆಧಾರಿತ):
 ಡಾ ರೆಡ್ಡೀಸ್ ಫೌಂಡೇಶನ್ ಸಶಕ್ತ್ ಸ್ಕಾಲರ್‌ಶಿಪ್ 2019

ವಿವರ: ವಿಜ್ಞಾನ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಇರುವ ಭಾರತದ ಬಾಲಕಿಯರಿಗೆ ಡಾ ರೆಡ್ಡೀಸ್ ಫೌಂಡೇಶನ್ (ಡಿಆರ್‌ಎಫ್) ನೀಡುವ ಸ್ಕಾಲರ್‌ಶಿಪ್. ಗ್ರಾಮೀಣ ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಾಲಕಿಯರು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶವಿದೆ.
 ಅರ್ಹತೆ: 12ನೇ ತರಗತಿ ತೇರ್ಗಡೆಯಾಗಿರುವ ಯುವ ಭಾರತೀಯ ಬಾಲಕಿಯರು, ಶುದ್ಧ ನೈಸರ್ಗಿಕ ವಿಜ್ಞಾನ ವಿಷಯದಲ್ಲಿ ಬಿಎಸ್ಸಿಗೆ ನೋಂದಣಿಗೊಂಡಿರುವವರು ಅರ್ಜಿ ಸಲ್ಲಿಸಬಹುದು.
ನೆರವು: ಅರ್ಹ ಅಭ್ಯರ್ಥಿಗಳಿಗೆ ವರ್ಷಕ್ಕೆ 80 ಸಾವಿರ ರೂ( 3ವರ್ಷಕ್ಕೆ 2,40,000 ರೂ.) ನೀಡಲಾಗುವುದು. (ಬೋಧನಾ ಶುಲ್ಕ, ಜೀವನ ವೆಚ್ಚ ಹಾಗೂ ಇತರ ಶಿಕ್ಷಣ ಸಂಬಂಧಿ ವೆಚ್ಚಗಳು ಸೇರಿ).
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IAS1

****************************
ವಿದ್ಯಾರ್ಥಿವೇತನ
 (ಅರ್ಹತೆ ಆಧಾರಿತ):
ದಿ ರ್ಹೋಡ್ಸ್ ಸ್ಕಾಲರ್‌ಶಿಪ್ಸ್ ಫಾರ್ ಇಂಡಿಯಾ, ಆಕ್ಸ್‌ಫರ್ಡ್ ವಿವಿ 2019

ವಿವರ: ಬ್ರಿಟನ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಆಕ್ಸ್‌ಫರ್ಡ್ ವಿವಿಯ ರ್ಹೋಡ್ಸ್ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಶಿಕ್ಷಣೇತರ ವೆಚ್ಚ ಪಾವತಿ ಸೇರಿದಂತೆ ಹಲವು ಪ್ರಯೋಜನ ದೊರಕಲಿದೆ.
ಅರ್ಹತೆ: ಪ್ರಥಮ ದರ್ಜೆಯಲ್ಲಿ ಪದವಿ ತೇರ್ಗಡೆಯಾಗಿರುವ 2020ರ ಅಕ್ಟೋಬರ್ 1ಕ್ಕೆ ಅನ್ವಯಿಸುವಂತೆ 19ರಿಂದ 25 ವರ್ಷದ ಭಾರತೀಯ ವಿದ್ಯಾರ್ಥಿಗಳು (ಬ್ರಿಟನ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮುಂದುವರಿಸಲು ಆಸಕ್ತಿ ಇರುವವರು) ಅರ್ಜಿ ಸಲ್ಲಿಸಬಹುದು.
ನೆರವು: ಅರ್ಹ ಅಭ್ಯರ್ಥಿಗಳಿಗೆ ವಿವಿ/ ಕಾಲೇಜು ಬೋಧನಾ ಶುಲ್ಕ ಸಂಪೂರ್ಣ ಮನ್ನಾ, ಜೀವನ ವೆಚ್ಚವಾಗಿ ವರ್ಷಕ್ಕೆ 15,144 ಗ್ರೇಟ್ ಬ್ರಿಟನ್ ಪೌಂಡ್ (ಜಿಬಿಪಿ)ಮೊತ್ತ, ಬ್ರಿಟನ್‌ಗೆ ಹೋಗಿ ಬರುವ ವಿಮಾನ ಪ್ರಯಾಣದ ವೆಚ್ಚ, ನೆಲೆಸುವ ವೆಚ್ಚವಾಗಿ 225 ಜಿಬಿಪಿ ಹಾಗೂ ಆರೋಗ್ಯ ಸುರಕ್ಷಾ ಸೌಲಭ್ಯ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IIP1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News