ಮರದ ನಾಟಾಗಳ ಅಕ್ರಮ ಸಾಗಾಟ: ವಾಹನ ಸಹಿತ ಮಾಲು ವಶ

Update: 2019-07-20 11:29 GMT

ಮಡಿಕೇರಿ, ಜು.20: ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಮೂಲಕ ಮೈಸೂರು ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ಮರದ ನಾಟಾಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಶನಿವಾರ ಮುಂಜಾನೆ 3 ಗಂಟೆಗೆ ವಾಹನವೊಂದನ್ನು ಗೇಟ್ ಬಳಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ವೇಗವಾಗಿ ತೆರಳಿದ ಕಾರಣ ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಎಂ.ಜಿ.ಮಣಿಕಂಠ ಎಂಬವರು ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿ ಕೊಪ್ಪ ಬಳಿ ಅಡ್ಡಹಾಕಿ ವಾಹನವನ್ನು ಮಾಲು ಸಮೇತ ವಶಪಡಿಸಿಕೊಂಡಿದ್ದಾರೆ.
ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 7 ಬೀಟೆ ಮರದ ನಾಟಾಗಳು ಪತ್ತೆಯಾಗಿದ್ದು, ವಾಹನ ಮತ್ತು ಬೀಟೆ ಮರದ ಮೌಲ್ಯ ರೂ.5 ಲಕ್ಷ ಎಂದು ಅಂದಾಜಿಸಲಾಗಿದೆ.

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸೌದೆ ತುಂಬಿದ ವಾಹನವೊಂದನ್ನು ಕುಶಾಲನಗರ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪಿಕ್‍ಅಪ್ ವಾಹನ (ಕೆಎಲ್.11.ಪಿ.7065) ದಲ್ಲಿ ಸೌದೆ ತುಂಬಿ ರಾತ್ರಿ ವೇಳೆ ಸಾಗಾಟ ಮಾಡುತ್ತಿದ್ದ ಸಂದರ್ಭ ಕೊಪ್ಪ ಗೇಟ್ ಬಳಿ ವಶಪಡಿಸಿಕೊಂಡು ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News