ಅತೃಪ್ತ ಶಾಸಕರು ಸೆಗಣಿ ತಿಂದು ಮುಂಬೈಗೆ ಹೋಗಿದ್ದಾರೆ: ಶಾಮನೂರು ಶಿವಶಂಕರಪ್ಪ

Update: 2019-07-20 14:23 GMT

ದಾವಣಗೆರೆ, ಜು.20: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವ ಕಾಂಗ್ರೆಸ್, ಜೆಡಿಎಸ್ ಅತೃಪ್ತ ಶಾಸಕರು ಸೆಗಣಿ ತಿಂದು ಹೋಗಿದ್ದಾರೆಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಸೆಗಣಿ ತಿಂದು ಮುಂಬೈಗೆ ಹೋಗಿರುವುದರಿಂದ ವಾಪಸ್ ಬರುವುದು ಅನುಮಾನ. ಆದರೂ ನಮ್ಮ ನಾಯಕರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಅತೃಪ್ತ ಶಾಸಕರು ಸದನಕ್ಕೆ ಬಂದು ಸರಕಾರದ ಪರವಾಗಿ ಮತ ಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News