ಹೋರ್ಮುಝ್ ಜಲಸಂಧಿ ಬಳಸದಿರಲು ಹಡಗುಗಳಿಗೆ ಬ್ರಿಟನ್ ಸೂಚನೆ

Update: 2019-07-20 17:19 GMT

ಲಂಡನ್, ಜು. 20: ಬ್ರಿಟನ್‌ನ ತೈಲ ಟ್ಯಾಂಕರೊಂದನ್ನು ಇರಾನ್ ವಶಪಡಿಸಿಕೊಂಡ ಬಳಿಕ, ‘ಸ್ವಲ್ಪ ಸಮಯ’ ಹೋರ್ಮುಝ್ ಜಲಸಂಧಿಯನ್ನು ಬಳಸದಿರುವಂತೆ ಬ್ರಿಟನ್ ತನ್ನ ಹಡಗುಗಳಿಗೆ ಶನಿವಾರ ಸೂಚನೆ ನೀಡಿದೆ.

‘‘ಇರಾನ್‌ನ ಅಸ್ವೀಕಾರಾರ್ಹ ಕೃತ್ಯಗಳಿಂದ ನಮಗೆ ಕಳವಳವಾಗಿದೆ. ಇರಾನ್‌ನ ಕೃತ್ಯವು ಅಂತರ್‌ರಾಷ್ಟ್ರೀಯ ಹಡಗುಯಾನ ಸ್ವಾತಂತ್ರಕ್ಕೆ ಎದುರಾಗಿರುವ ಸ್ಪಷ್ಟ ಸವಾಲಾಗಿದೆ’’ ಎಂದು ಸರಕಾರಿ ವಕ್ತಾರೆಯೊಬ್ಬರು ಹೇಳಿದರು.

ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಸರಕಾರದ ‘ಕೋಬ್ರಾ’ ತುರ್ತು ಸಮಿತಿಯು ಶುಕ್ರವಾರ ರಾತ್ರಿ ಸಭೆ ನಡೆಸಿದ ಬಳಿಕ ವಕ್ತಾರೆ ಈ ವಿಷಯ ತಿಳಿಸಿದರು.

‘‘ಸದ್ಯಕ್ಕೆ ಈ ಪ್ರದೇಶದಿಂದ ದೂರವಿರುವಂತೆ ನಾವು ಬ್ರಿಟನ್ ಹಡಗುಗಳಿಗೆ ಸಲಹೆ ನೀಡಿದ್ದೇವೆ’’ ಎಂದರು.

ಈ ಬಗ್ಗೆ ವಾರಾಂತ್ಯದಲ್ಲಿ ಇನ್ನಷ್ಟು ಸಭೆಗಳು ನಡೆಯಲಿವೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News