ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಆರೋಪಿಸಿ ರೈತರಿಂದ ರಸ್ತೆ ತಡೆ

Update: 2019-07-20 18:44 GMT

ಮಂಡ್ಯ, ಜು.20: ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಇಂಡುವಾಳು ಗ್ರಾಮದ ಬಳಿ ಶನಿವಾರ ರೈತರು ಹೆದ್ದಾರಿ ತಡೆ ನಡೆಸಿದರು.

ನಮ್ಮ ಬೆಳೆಗಳಿಗೆ ನೀರು ಕೇಳಿದಾಗ ನೀರು ಬಿಡದೆ ಈಗ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಲಾಶಯಕ್ಕೆ ಕೇವಲ 995 ಕ್ಯೂಸೆಕ್ ಇದೆ. ನಾಲೆಗಳಿಗೆ 2,611 ಕ್ಯೂಸೆಕ್ ಬಿಡಲಾಗುತ್ತಿದೆ. ಆದರೆ, ತಮಿಳುನಾಡಿಗಾಗಿ ನದಿಗೆ 5 ಸಾವಿರ ಕ್ಯೂಸೆಕ್ ಹರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ರೈತರು ಸಂಕಷ್ಟದಲ್ಲಿರುವಾಗ ರೆಸಾರ್ಟ್‍ನಲ್ಲಿ ಉಳಿದುಕೊಂಡಿರುವ ಶಾಸಕರು  ರೆಸಾರ್ಟ್ ಬಿಟ್ಟು ಬಂದು ರೈತರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಬಹಿಷ್ಕಾರ ಹಾಕುವುದಾಗಿ ಅವರು  ಎಚ್ಚರಿಸಿದ ಅವರು, ಸಂಸದೆ ಸುಮಲತಾ ದೆಹಲಿ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News