ವಿಶ್ವಾಸ ಮತಯಾಚನೆ ವೇಳೆ ತಟಸ್ಥವಾಗಿರುತ್ತೇನೆ: ಬಿಎಸ್ಪಿ ಶಾಸಕ ಎನ್.ಮಹೇಶ್

Update: 2019-07-21 12:48 GMT

ಚಾಮರಾಜನಗರ, ಜು.21: ಸೋಮವಾರ ರಾಜ್ಯ ಮೈತ್ರಿ ಸರ್ಕಾರಕ್ಕೆ ನಿರ್ಣಾಯಕ ದಿನ, ಅಂದು ನಡೆಯಲಿರುವ ಮೈತ್ರಿ ಸರ್ಕಾರ ಮಂಡಿಸಲಿರುವ ಬಹುಮತ ಸಾಬೀತಿನ ಅಧಿವೇಶನಕ್ಕೆ ಗೈರಾಗುವುದಾಗಿ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎನ್.ಮಹೇಶ್ ಹೇಳಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ಬಿಎಸ್ಪಿ ಶಾಸಕ ಎನ್.ಮಹೇಶ್ ಮಾದ್ಯಮದವರೊಂದಿಗೆ ಮಾತನಾಡಿ, ಬಿಎಸ್ಪಿ ಪಕ್ಷದ ಅಧಿನಾಯಕಿ ಮಾಯಾವತಿ ಅವರು ಬಹುಮತ ಸಾಬೀತಿನ‌ ಅಧಿವೇಶನದಲ್ಲಿ ಭಾಗವಹಿಸದೆ ತಟಸ್ಥವಾಗಿರುವಂತೆ ಸೂಚನೆ ನೀಡಿದ್ದರಿಂದ ಅಧಿವೇಶನದಿಂದ ದೂರ ಉಳಿದಿರುವುದಾಗಿ ಸ್ಪಷ್ಟಪಡಿಸಿದರು.

ವಿಶ್ವಾಸ ಮತ ಯಾಚನೆ ವೇಳೆ ತಟಸ್ಥ ನಾಗಿರುತ್ತೇನೆ ಎಂದು ಹೇಳಿದ ಮಹೇಶ್, ಬಿಎಸ್ಪಿ ವರಿಷ್ಟೆ ಮಾಯಾವತಿಯವರಿಂದ ಸೂಚನೆ ಬಂದಿರುವ ಹಿನ್ನೆಲೆ ಈ ನಿರ್ಧಾರ ತೆಗೆದಿದ್ದೇನೆ ಎಂದರು.

ಈಗಾಗಲೇ ಅಧಿವೇಶನಕ್ಕೆ ಗೈರಾಗುತ್ತಿದ್ದು, ಈ ಮೊದಲು ಮೈತ್ರಿ ಸರ್ಕಾರದ ಜೊತೆಗಿದ್ದ ಎನ್.ಮಹೇಶ್ ಇದೀಗ ಉಲ್ಟಾ ಹೊಡೆದಿದ್ದರಿಂದ ಮೈತ್ರಿ ಸರ್ಕಾರದ ಬಹುಮತದ ಸಂಖ್ಯೆ ಮತ್ತೆ ಇಳಿಮುಖವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News