ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Update: 2019-07-22 18:31 GMT

ಮಾನ್ಯರೇ,

ಮದರಾಸು ವಿಶ್ವವಿದ್ಯಾನಿಲಯವು 2018-19ನೇ ಸಾಲಿನಲ್ಲಿ ರೆಗ್ಯುಲರ್ ಕೋರ್ಸ್‌ನಲ್ಲಿ ಕನ್ನಡ ಎಂ. ಎ., ಎಂ. ಫಿಲ್. ಪದವಿಗಳ ರೆಗ್ಯುಲರ್ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಬಿ. ಎ. ಪದವಿಯಲ್ಲಿ ಐಚ್ಛಿಕ ಕನ್ನಡ ಅಥವಾ ಬಿ.ಎ./ಬಿ.ಎಸ್ಸಿ./ಬಿ.ಕಾಂ./ಬಿ.ಬಿ.ಎಂ. ಅಥವಾ ಯಾವುದೇ ಪದವಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರುವವರು ಕನ್ನಡ ಎಂ. ಎ. ಪದವಿಗೆ ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ.

ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎಂ. ಎ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ತಿಂಗಳೂ 2,500 ರೂ. ಶಿಷ್ಯವೇತನ ದೊರಕುತ್ತದೆ. ಅಲ್ಲದೆ ಚೆನ್ನೈನ ಕರ್ನಾಟಕ ಸಂಘವು ವರ್ಷಕ್ಕೆ 5,000 ರೂ. ಪ್ರೋತ್ಸಾಹ ಧನವನ್ನೂ ನೀಡುತ್ತದೆ.
 ಅಂತಿಮ ಪದವಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದು. ರೆಗ್ಯುಲರ್ ಕೋರ್ಸ್‌ಗಳಿಗೆ ಮಾತ್ರ ಅವಕಾಶ. ಹೆಚ್ಚಿನ ವಿವರಗಳಿಗೆ 8939387354 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
 - ಡಾ. ತಮಿಳು ಸಲ್ವಿ, ಮುಖ್ಯಸ್ಥರು, ಕನ್ನಡ ವಿಭಾಗ
ಮದರಾಸು ವಿಶ್ವ ವಿದ್ಯಾನಿಲಯ,
ಮೆರಿನಾ ಕ್ಯಾಂಪಸ್, ಚೆನ್ನೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News