ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-07-26 18:31 GMT

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಪಿಯರ್ಸನ್ ಮಿಪ್ರೊ ಇಂಗ್ಲಿಷ್ ಸ್ಕಾಲರ್ ಪ್ರೋಗ್ರಾಂ 2019

 ವಿವರ: ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಇಂಗ್ಲಿಷ್ ಓದುವ, ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅವರ ವೃತ್ತಿಜೀವನದ ಅವಕಾಶ ವೃದ್ಧಿಸುವ ಉದ್ದೇಶದಿಂದ ನೀಡುವ ವಿಶಿಷ್ಟ ಸ್ಕಾಲರ್‌ಶಿಪ್.
 ಅರ್ಹತೆ: 18ರಿಂದ 35 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ಮಿಪ್ರೊ ಇಂಗ್ಲಿಷ್ ಕಲಿಕಾ ಕಾರ್ಯಕ್ರಮಕ್ಕೆ ದಾಖಲಾತಿ ಮಾಡಿಕೊಂಡವರು ಹಾಗೂ 8 ಜಿಎಸ್‌ಇ ಹಂತ ತೇರ್ಗಡೆಯಾದವರು ಅರ್ಹರು.
ನೆರವು: ಅರ್ಹ ಅಭ್ಯರ್ಥಿಗಳಿಗೆ 10,000 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/PMES01

*******************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಬಿಎ ಸ್ಕಾಲರ್‌ಶಿಪ್ 2019-21

 ವಿವರ: ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಮತ್ತು ವಿದ್ಯಾರ್ಥಿ ವೇತನ ಪಡೆಯಲು ಬ್ರೈನರ್ಸ್ ಬ್ಯುಸಿನೆಸ್ ಸ್ಕೂಲ್ ಅವಕಾಶ ಮಾಡಿಕೊಡುತ್ತಿದೆ. ಬ್ರೈನರ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯು ಯೋಗ್ಯತೆ ಮತ್ತು ಸ್ಕಾಲರ್‌ಶಿಪ್ ಪರೀಕ್ಷೆಯಾಗಿದ್ದು, ಈ ಮೂಲಕ 1,000 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಒಟ್ಟು 50 ಲಕ್ಷ ರೂ. ಮೊತ್ತದ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: ಮಾನ್ಯತೆ ಪಡೆದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 14ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳು ಬ್ರೈನರ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಂ(ಬಿಟಿಎಸ್‌ಇ)ಗೆ ಅರ್ಹರು. ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕ ಗಳಿಸಿದವರು ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗುತ್ತಾರೆ.
 ನೆರವು: ಅರ್ಹ ಅಭ್ಯರ್ಥಿಗಳಿಗೆ ಅಖಿಲ ಭಾರತ ಬಿಟಿಎಸ್‌ಇ ಪರೀಕ್ಷೆಯಲ್ಲಿ ಗಳಿಸಿದ ರ್ಯಾಂಕ್ ಆಧಾರದಲ್ಲಿ 2,000 ದಿಂದ 10,000 ರೂ.ವರೆಗೆ ನೀಡಲಾಗುವುದು. ಅಲ್ಲದೆ ಕೌಶಲ್ಯ ಅಭಿವೃದ್ಧಿಗೆ ಆನ್‌ಲೈನ್ ಮೂಲಕ ಉಚಿತ ಕೋರ್ಸ್‌ಗಳನ್ನೂ ಪಡೆಯಲು ಅವಕಾಶವಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 7, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/BTS01
*******************
ವಿದ್ಯಾರ್ಥಿವೇತನ
(ಅವಶ್ಯಕತೆ ಆಧಾರಿತ):
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಬಿಎ ಸ್ಕಾಲರ್‌ಶಿಪ್ 2019-21

ವಿವರ: ದೇಶದಾದ್ಯಂತದ 150 ಕಾಲೇಜುಗಳಲ್ಲಿ ಪೂರ್ಣಾವಧಿಯ ಎಂಬಿಎ ಪದವಿಯ ಪ್ರಥಮ ವರ್ಷಕ್ಕೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುತ್ತಿರುವ ಸ್ಕಾಲರ್‌ಶಿಪ್ ಇದಾಗಿದೆ. ಎಂಬಿಎ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದ ಸ್ಕಾಲರ್‌ಶಿಪ್.
 ಅರ್ಹತೆ: ಆಯ್ದ 150 ಕಾಲೇಜುಗಳಲ್ಲಿ ಪೂರ್ಣಾ ವಧಿಯ ಎಂಬಿಎ ಪದವಿಯ ಪ್ರಥಮ ವರ್ಷಕ್ಕೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು, ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಯ ಎಂಬಿಎ ಪದವಿಗೆ ವಾರ್ಷಿಕ 1 ಲಕ್ಷ ರೂ. ಯಂತೆ 2 ವರ್ಷ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IFBMS1
*******************

ವಿದ್ಯಾರ್ಥಿವೇತನ
 (ಅರ್ಹತೆ ಆಧಾರಿತ):
ಟೆಲ್‌ಅವೀವ್ ಯುನಿವರ್ಸಿಟಿ ಅಂಡರ್‌ಗ್ರಾಜ್ಯುವೇಟ್ ಪ್ರೋಗ್ರಾಂ 2019, ಇಸ್ರೇಲ್

 ವಿವರ: ಇಸ್ರೇಲ್‌ನ ಟೆಲ್ ಅವೀವ್ ವಿವಿಯು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾದವರಿಂದ ಬಿಎಸ್ಸಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಕೋರ್ಸ್‌ಗೆ ಸೇರಲು ಹಾಗೂ ಬಿಎ-ಲಿಬರಲ್ ಆರ್ಟ್ಸ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: 12ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕಗಳೊಂದಿಗೆ ತೇರ್ಗಡೆಯಾಗಿರುವ, ಅಖಿಲ ಭಾರತ ಜೆಇಇ(ಮೈನ್ಸ್)ನಲ್ಲಿ 1ರಿಂದ 40,000 ದವರೆಗಿನ ರ್ಯಾಂಕ್ ಪಡೆದಿರುವ, ಎಸ್‌ಎಟಿ/ಎಸಿಟಿಯಲ್ಲಿ ಉನ್ನತ ಸಾಧನೆ ಮಾಡಿರುವವರು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ 10,000 ಅಮೆರಿಕನ್ ಡಾಲರ್ ಮೊತ್ತದಷ್ಟು ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TAU5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News