ಇಸ್ರೇಲ್ ಪ್ರಧಾನಿಯ ಚುನಾವಣಾ ಪ್ರಚಾರ ಬ್ಯಾನರ್‌ನಲ್ಲಿ ಮೋದಿ!

Update: 2019-07-29 13:25 GMT

ಟೆಲ್ ಅವೀವ್, ಜು.29: ಇಸ್ರೇಲ್‌ನಲ್ಲಿ ಸೆಪ್ಟೆಂಬರ್ 17ರಂದು ನಡೆಯುವ ಚುನಾವಣೆಗೆ ಪಕ್ಷಗಳ ಭರ್ಜರಿ ಪ್ರಚಾರ ಆರಂಭವಾಗಿದ್ದು, ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಲಿಕ್ಯುಡ್ ಪಾರ್ಟಿ ವಿವಿಧ ವರ್ಗಗಳನ್ನು ಸೆಳೆಯುವ ಸಲುವಾಗಿ ತನ್ನ ಪ್ರಚಾರ ಬ್ಯಾನರ್‌ಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾವಚಿತ್ರಗಳನ್ನು ಹಾಕಿದೆ.

ಮೂವರು ವಿಶ್ವನಾಯಕರ ಜತೆಗೆ ನೇತನ್ಯಾಹು ನಿಕಟವಾಗಿದ್ದಾರೆ ಎನ್ನುವುದನ್ನು ಬಿಂಬಿಸುವ ಪ್ರಯತ್ನವಾಗಿ ಪಕ್ಷದ ಕೇಂದ್ರ ಕಚೇರಿ ಮುಂದೆ ಈ ಮೂವರ ಜತೆ ನೇತನ್ಯಾಹು ಇರುವ ಚಿತ್ರ "ನೇತನ್ಯಾಹು ಇನ್ ಎ ಡಿಫರೆಂಟ್ ಲೀಗ್" ಎಂಬ ಶೀರ್ಷಿಕೆಯೊಂದಿಗೆ ರಾರಾಜಿಸುತ್ತಿದೆ.

ವಿಶ್ವನಾಯಕರ ಜತೆಗೆ ನೇತನ್ಯಾಹು ನಿಕಟ ಸಂಬಂಧ ಹೊಂದಿರುವುದನ್ನು ಬಿಂಬಿಸುವ ಮೂಲಕ ಇಸ್ರೇಲ್ ರಾಜಕಾರಣದಲ್ಲಿ ಇವರಿಗೆ ಯಾರೂ ಸಾಟಿಯಾಗಲಾರರು ಎಂಬ ಸಂದೇಶವನ್ನು ನೀಡಲು ಪಕ್ಷ ಹೊರಟಿದೆ. ದೆಶದ ಭದ್ರತೆಗೆ ಇದು ಅನಿವಾರ್ಯ ಎಂಬ ಸಂದೇಶ ಸಾರಿದೆ.

ಚುನಾವಣೆಗೆ ಎಂಟು ದಿನ ಮೊದಲು ಅಂದರೆ ಸೆಪ್ಟೆಂಬರ್ 9ರಂದು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News