ಬಿಜೆಪಿ ಸಂಸದೆ ರಮಾ ದೇವಿ ವಿರುದ್ಧ ಹೇಳಿಕೆಗೆ ಕ್ಷಮೆ ಯಾಚಿಸಿದ ಆಝಂ ಖಾನ್

Update: 2019-07-29 16:00 GMT

ಹೊಸದಿಲ್ಲಿ, ಜು.29: ಬಿಜೆಪಿ ಸಂಸದೆ ರಮಾ ದೇವಿ ವಿರುದ್ಧ ನೀಡಿರುವ ಹೇಳಿಕೆಗಾಗಿ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಸೋಮವಾರ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಗುರುವಾರ ರಮಾ ದೇವಿ ಸದನವನ್ನು ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಆಕೆಯ ಕುರಿತು ಖಾನ್ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ವಾರಾಂತ್ಯದ ವಿರಾಮದ ನಂತರ ಲೋಕಸಭೆ ಮತ್ತೆ ಸೇರಿದಾಗ ಸ್ಪೀಕರ್ ಓಂ ಬಿರ್ಲಾ ಅವರು ಆಝಂ ಖಾನ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ನಾನು ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಹಲವು ಬಾರಿ ಸಚಿವನಾಗಿದ್ದೇನೆ ಮತ್ತು ರಾಜ್ಯಸಭಾ ಸದಸ್ಯನೂ ಆಗಿದ್ದೇನೆ. ನಾನು ಸಂಸದೀಯ ವ್ಯವಹಾರಗಳ ಸಚಿವನೂ ಆಗಿದ್ದೆ. ನನಗೆ ಶಾಸಕಾಂಗೀಯ ಪ್ರಕ್ರಿಯೆಗಳು ತಿಳಿದಿವೆ. ಆದರೆ, ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಖಾನ್ ತಿಳಿಸಿದ್ದಾರೆ.

ಆಝಂ ಖಾನ್ ಮಹಿಳೆಯರ ಬಗ್ಗೆ ಅವಮಾನಕಾರಿ ಹೇಳಿಕೆಯನ್ನು ನೀಡುವ ಚಾಳಿ ಹೊಂದಿದ್ದಾರೆ. ಈ ಹಿಂದೆ ಅವರು ಸದನದ ಹೊರಗೆ ಹೇಳಿಕೆ ನೀಡುತ್ತಿದ್ದರು ಈಗ ಸದನದ ಒಳಗೆಯೇ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದು ರಮಾ ದೇವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News