ಕೆಎಂಎಫ್: ಯಾವ ನಿರ್ದೇಶಕರನ್ನೂ ಅಪಹರಣ ಮಾಡಿಲ್ಲ- ಎಚ್.ಡಿ.ರೇವಣ್ಣ

Update: 2019-07-29 16:07 GMT

ಬೆಂಗಳೂರು, ಜು.29: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಗೂ (ಕೆಎಂಎಫ್) ಮೈತ್ರಿ ಪಕ್ಷಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅಧ್ಯಕ್ಷರಾಗುತ್ತಾರೆ ಎಂದು ಯಾರು ಮಾತು ಕೊಟ್ಟಿದ್ದಾರೆ. ಅಲ್ಲದೆ, ಇದರಲ್ಲಿ ಎಚ್.ಡಿ.ಕುಮಾರಸ್ವಾಮಿಗೂ ಮೈತ್ರಿ ಪಕ್ಷಗಳಿಗೂ ಸಂಬಂಧವಿಲ್ಲ ಎಂದು ನುಡಿದರು. ಕಳೆದ 3 ತಿಂಗಳಿಂದ ಚುನಾವಣೆ ಪ್ರಕ್ರಿಯೆ ನಡೆಯುತಿತ್ತು. ಜು.15 ರಿಂದ 30ರ ಒಳಗೆ ಎಲ್ಲ ಒಕ್ಕೂಟದ ಚುನಾವಣೆ ಆಗಬೇಕು ಎಂದು ಸೂಚಿಸಲಾಗಿತ್ತು. ಆದರೆ, ಸೋಮವಾರ ನಡೆಯಬೇಕಾಗಿದ್ದ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. ಯಾವ ಕಾರಣಕ್ಕೆ ಮುಂದೂಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ತಿಳಿಸಿದರು.

ನಾನು ಯಾವ ನಿರ್ದೇಶಕರನ್ನು ಅಪಹರಣ ಮಾಡಿಲ್ಲ. ಎಲ್ಲ ನಿರ್ದೇಶಕರು ಹಾಜರಿದ್ದಾರೆ ಎಂದ ಅವರು, ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳಿವೆ. ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದೆ. 4 ಬಾರಿ ಸಮಿತಿ ಸಭೆ ನಡೆದಿದೆ. ಈಗಲೂ ನಮ್ಮ ಹತ್ತಿರ 8 ನಿರ್ದೇಶಕರ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News