ಶಾಸಕರ ಅನರ್ಹ ನಿರ್ಧಾರ ಸ್ವಾಗತಾರ್ಹ: ಎಸ್‌ಡಿಪಿಐ

Update: 2019-07-29 17:52 GMT

ದಿಲ್ಲಿ, ಜು.29: ಪಕ್ಷದ ವಿಪ್ ಉಲ್ಲಂಘಿಸಿ ಒಂದು ತಿಂಗಳ ಕಾಲ ರಾಜಕೀಯ ಅತಿರೇಕದ ನಾಟಕದಲ್ಲಿ ತೊಡಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ 14ಕ್ಕೂ ಅಧಿಕ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರ ಸ್ವಾಹತಾರ್ಹ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಭಿಪ್ರಾಯಪಟ್ಟಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಏಕೆಂದರೆ ಈ ಬಂಡಾಯ ಶಾಸಕರು ಸರಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಜಾತ್ಯತೀತ ಮತಗಳ ಮೇಲೆ ಚುನಾಯಿತರಾದ ಶಾಸಕರು ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಜನಾದೇಶಕ್ಕೆ ದ್ರೋಹವೆಸಗಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ತತ್ವಸಿದ್ಧಾಂತ ಮತ್ತು ಹಾದಿಯಿಂದ ದೂರ ಸರಿದಿವೆ. ಜಾತ್ಯತೀತವಲ್ಲದ ಮತಗಳನ್ನು ಪಡೆಯಲು ಇವೆರಡೂ ಪಕ್ಷಗಳು ಮೃದು ಹಿಂದುತ್ವದ ಕಡೆಗೆ ವಾಲಿವೆ. ಈ ಪಕ್ಷಗಳು ಒತ್ತಡಗಳಿಗೆ ಬಲಿಯಾಗುತ್ತಿವೆ. ಅನೇಕ ಬಾರಿ ಉದ್ಯಮಿಗಳ ಪ್ರತಿನಿಧಿಗಳು, ಭೂ ಮಾಫಿಯಾದ ವ್ಯಕ್ತಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿವೆ. ಗೆದ್ದ ನಂತರ ಅವರು ತಮ್ಮ ಪಟ್ಟಭದ್ರ ತಾಸಕ್ತಿಗಳಿಗೆ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News