ಅಭಿವೃದ್ಧಿ ಕುಂಠಿತ: ಮೋದಿ ಸರಕಾರದ ವಿರುದ್ಧ ‘ಬಜಾಜ್’ ಸಂಸ್ಥೆಯ ಅಧ್ಯಕ್ಷ ರಾಹುಲ್ ಬಜಾಜ್, ಪುತ್ರ ರಾಜೀವ್ ಆಕ್ರೋಶ

Update: 2019-07-30 10:54 GMT

ಮುಂಬೈ, ಜು.30: ಅಭಿವೃದ್ಧಿಯ ವೇಗ ಹೆಚ್ಚಿಸಲು ಕೇಂದ್ರ ಸರಕಾರ ವಿಫಲವಾಗಿದೆಯೆಂದು ಖ್ಯಾತ ಬಜಾಜ್ ಆಟೋ ಕಂಪೆನಿಯ ಅಧ್ಯಕ್ಷ ರಾಹುಲ್ ಬಜಾಜ್ ಮತ್ತವರ ಪುತ್ರ ಹಾಗೂ ಸಂಸ್ಥೆಯ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ಇತ್ತೀಚೆಗೆ ನಡೆದ ಕಂಪೆನಿಯ 12ನೇ ವಾರ್ಷಿಕ ಮಹಾಸಭೆಯಲ್ಲಿ ಕಿಡಿಕಾರಿದ್ದಾರೆ ಎಂದು thewire.in ವರದಿ ಮಾಡಿದೆ.

ತನ್ನ ಇ-ವಾಹನ ನೀತಿ ಕುರಿತಂತೆಯೂ ಗೊಂದಲಕಾರಿ ನಿಲುವನ್ನು ಹೊಂದಿರುವ ಸರಕಾರವನ್ನು ಅವರು ಟೀಕಿಸಿದ್ದಾರೆ.

“ಬೇಡಿಕೆಯೂ ಇಲ್ಲ, ಖಾಸಗಿ ಹೂಡಿಕೆಯೂ ಇಲ್ಲ. ಹೀಗಿರುವಾಗ  ಪ್ರಗತಿ ಎಲ್ಲಿಂದ ಬರಲಿದೆ?, ಅದೇನು ಸ್ವರ್ಗದಿಂದ ಉದುರುವುದಿಲ್ಲ. ಆಟೊಮೊಬೈಲ್ ಉದ್ಯಮ ಕಷ್ಟಕರ ಅವಧಿಯಲ್ಲಿದೆ'' ಎಂದು ರಾಹುಲ್ ಬಜಾಜ್ ಸಭೆಯಲ್ಲಿ ಮಾತನಾಡುತ್ತಾ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

“ಸರಕಾರ ಇದನ್ನು ಹೇಳಬಹುದು ಅಥವಾ ಹೇಳದೇ ಇರಬಹುದು, ಆದರೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ವಿಶ್ವ ಬ್ಯಾಂಕ್ ನೀಡಿದ ಸುಳಿವುಗಳು ಭಾರತದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಗತಿ ಪ್ರಮಾಣ ಕುಂಠಿತವಾಗಿದೆಯೆಂದು ಸೂಚಿಸುತ್ತದೆ. ಎಲ್ಲಾ ಸರಕಾರದಂತೆ ಅವರು ಸಂತಸದ ಮುಖ ತೋರಿಸಬಹುದು. ಆದರೆ ವಾಸ್ತವ ವಾಸ್ತವವೇ ಆಗಿದೆ'' ಎಂದು ರಾಹುಲ್ ಬಜಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News