ಅಫ್ಘಾನ್ ನಲ್ಲಿ ಅಮೆರಿಕ ಡ್ರೋನ್ ದಾಳಿ: ಕೇರಳ ಯುವಕ ಮೃತ್ಯು

Update: 2019-08-01 12:33 GMT

ಕಾಬೂಲ್: ಅಪ್ಘಾನಿಸ್ತಾನದ ನಂಗ್ರಹಾರ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕೇರಳದ ಮುಹಮ್ಮದ್ ಮುಹ್ಸಿನ್ ಎಂಬ ವ್ಯಕ್ತಿ ಮೃತಪಟ್ಟಿರುವುದನ್ನು ಅಮೆರಿಕದ ಬೇಹುಗಾರಿಕೆ ಇಲಾಖೆ ದೃಢಪಡಿಸಿದೆ.

ಜುಲೈ 18ರಂದು ನಡೆದ ದಾಳಿಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್ ಪಟ್ಟಣದ ಮುಹ್ಸಿನ್ ಜತೆಗೆ ಪಾಕಿಸ್ತಾನಿ ಐಎಸ್ ಕಮಾಂಡರ್ ಹುಝೈಫಾ ಕೂಡಾ ಹತನಾಗಿದ್ದಾನೆ. ಈತ ಡಯೇಷ್ ಸಂಘಟನೆಗೆ ಭಾರತದಿಂದ ಆನ್‌ಲೈನ್ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದ ಎಂದು ತಿಳಿಸಿದೆ.

ಕೇರಳ ಪೊಲೀಸರು ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ಪ್ರಕಾರ, ಮುಹ್ಸಿನ್ ಸಾವಿನ ಬಗ್ಗೆ ಜುಲೈ 23ರಂದು ಅಪ್ಘಾನಿಸ್ತಾನದ ದೂರವಾಣಿ ಸಂಖ್ಯೆಯಿಂದ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಜೂನ್ 15ರವರೆಗೆ 40 ಮಂದಿ ಪುರುಷರು, 21 ಮಹಿಳೆಯರು ಮತ್ತು 37 ಮಕ್ಕಳು ಸೇರಿ 98 ಮಂದಿ ಅಪ್ಘಾನಿಸ್ತಾನದಲ್ಲಿ ಐಎಸ್‌ನ ಭಾಗವಾಗಿದ್ದಾರೆ. ಈ ಪೈಕಿ 39 ಮಂದಿ ಇಸ್ಲಾಮಿಕ್ ಉಗ್ರ ಚಟುವಟಿಕೆಗಳ ವೇಳೆ ಬಲಿಯಾಗಿದ್ದಾರೆ. ಹಾಲಿ ಇರುವ 59 ಮಂದಿಯಲ್ಲಿ ಬಹುತೇಕ ಮಂದಿ ಮಕ್ಕಳು ಸೇರಿದ್ದು, ಇವರಲ್ಲಿ ಬಹಳಷ್ಟು ಮಂದಿ ಪಶ್ಚಿಮ ಏಷ್ಯಾ ಮಾರ್ಗದ ಮೂಲಕ ಅಪ್ಘಾನಿಸ್ತಾನಕ್ಕೆ ತಮ್ಮ ಕುಟುಂಬದ ಜತೆ ತೆರಳಿದ್ದರು ಎಂದು ಮೂಲಗಳು ಹೇಳಿವೆ. ಈ ಕುಟುಂಬಗಳು ಪೂರ್ವ ಅಪ್ಘಾನಿಸ್ತಾನ ಪ್ರಾಂತ್ಯಗಳಲ್ಲಿ ವಾಸವಿದ್ದರು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News