ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-08-02 18:31 GMT

ವಿದ್ಯಾರ್ಥಿವೇತನ
(ಸಂಶೋಧನೆ ಆಧಾರಿತ):
ಅಬ್ದುಲ್ ಕಲಾಂ ಟೆಕ್ನಾಲಜಿ ಇನೊವೇಷನ್ ನ್ಯಾಷನಲ್ ಫೆಲೋಶಿಪ್ 2019-20

ವಿವರ: ಇಂಡಿಯನ್ ನ್ಯಾಷನಲ್ ಟೆಕ್ನಾಲಜಿ ಆಫ್ ಇಂಜಿನಿಯರಿಂಗ್ (ಐಎನ್‌ಎಇ) ದೇಶದಾದ್ಯಂತ ಅನುಭವೀ ಇಂಜಿನಿಯರ್ ವೃತ್ತಿಪರರಿಗೆ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯ ಕೈಗೊಳ್ಳಲು ಮಾಸಿಕ ಸಂಶೋಧನಾ ಸ್ಟೈಪಂಡ್ ನೀಡುತ್ತದೆ. 3 ವರ್ಷಗಳ ಅವಧಿಯದ್ದಾಗಿದ್ದು ಸಾಧನೆಯನ್ನು ಆಧರಿಸಿ 5 ವರ್ಷಗಳ ವರೆಗೆ ವಿಸ್ತರಿಸಬಹುದು.
ಅರ್ಹತೆ: ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ನಾಗರಿಕರು, ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಕನಿಷ್ಟ 5 ವರ್ಷಗಳ ಸೇವಾವಧಿ ಬಾಕಿ ಇರಬೇಕು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25 ಸಾವಿರ ರೂ. ಸ್ಟೈಪೆಂಡ್, ಸಂಶೋಧನೆಗೆ ಸಂಬಂಧಿಸಿದ ವೆಚ್ಚವಾಗಿ 15 ಲಕ್ಷ ರೂ. ಅನುದಾನ. ಇತರ ವೆಚ್ಚವಾಗಿ ವಾರ್ಷಿಕ 1 ಲಕ್ಷ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 10, 2019
ಅರ್ಜಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/AKT4

**************

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಟೆಲ್‌ಅವೀವ್ ಯುನಿವರ್ಸಿಟಿ ಮಾಸ್ಟರ್ಸ್ ಪ್ರೋಗ್ರಾಂ 2019, ಇಸ್ರೇಲ್

ವಿವರ: ಇಸ್ರೇಲ್‌ನಲ್ಲಿ 15 ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಆಸಕ್ತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದ ಸ್ಕಾಲರ್‌ಶಿಪ್.
ಅರ್ಹತೆ: ಆಯಾ ವಿಭಾಗಗಳಲ್ಲಿ ಪ್ರವೇಶಾತಿ ಪಡೆಯಲು ನಿಗದಿಗೊಳಿಸಿದ ಮಾನದಂಡವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಹಾಗೂ ವಸತಿ ವೆಚ್ಚದ ಶೇ.80ರಷ್ಟು ಮನ್ನಾ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TAU6

***********************
 ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆ(ಕೆವಿಪಿವೈ) 2019

 ವಿವರ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್ ಕೆವಿಪಿವೈ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ನಡೆಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
 ಅರ್ಹತೆ: (ಗಣಿತ ಮತ್ತು ವಿಜ್ಞಾನ ವಿಷಯದ ಜೊತೆ) 10ನೇ ತರಗತಿಯಲ್ಲಿ ಕನಿಷ್ಟ ಶೇ. 75 ಅಂಕ ಗಳಿಸಿದ ಭಾರತೀಯ ವಿದ್ಯಾರ್ಥಿಗಳು, ಈಗ 11 ಅಥವಾ 12ನೇ ತರಗತಿಯಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಎಸ್‌ಎ ಮತ್ತು ಎಸ್‌ಎಕ್ಸ್ ವಿಭಾಗದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ, ಪ್ರಥಮ ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ನಡೆಸುವವರು, ಎಂಎಸ್‌ಸಿ ಅಥವಾ ಎಂಎಸ್ ಪದವಿಯಲ್ಲಿ ಅಧ್ಯಯನ ನಡೆಸುವವರು(12ನೇ ತರಗತಿಯಲ್ಲಿ, ಪಿಸಿಎಂ ಅಥವಾ ಬಯಾಲಜಿ ವಿಷಯ ಒಳಗೊಂಡು ಶೇ.60ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು) ಎಸ್‌ಬಿ ವಿಭಾಗದ ಸ್ಕಾಲರ್‌ಶಿಪ್‌ಗೆ ಅರ್ಹರು. ಎಸ್ಸಿ/ಎಸ್ಟಿ/ಪಿಡಬ್ಲೂಡಿ ಅಭ್ಯರ್ಥಿಗಳಿಗೆ ಅರ್ಹತಾ ಮಾನದಂಡದಲ್ಲಿ ಶೇ.10ರ ವಿನಾಯಿತಿ ಇರುತ್ತದೆ.
 ನೆರವು: ಎಲ್ಲಾ ವಿಭಾಗಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 5 ಸಾವಿರ ರೂ. ಮಾಸಿಕ ಸ್ಟೈಪಂಡ್, ಬಿಎಸ್ಸಿ, ಬಿಎಸ್, ಬಿ.ಸ್ಟಾಟ್, ಬಿ.ಮ್ಯಾಥ್ಸ್, ಎಂಎಸ್, ಇಂಟೆಗ್ರೇಟೆಡ್ ಎಂಎಸ್‌ನ ಪ್ರಥಮ ವರ್ಷದಿಂದ ಮೂರನೇ ವರ್ಷದವರೆಗೆ 20 ಸಾವಿರ ರೂ. ವಾರ್ಷಿಕ ಸಾದಿಲ್ವಾರು ಅನುದಾನ ನೀಡಲಾಗುವುದು. ಅಲ್ಲದೆ ಮಾಸಿಕ ಸ್ಟೈಪೆಂಡ್ ಹಾಗೂ ವಾರ್ಷಿಕ ಅನುದಾನ ಹೆಚ್ಚಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 20, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/KVP9

****************
ವಿದ್ಯಾರ್ಥಿವೇತನ
 (ಅರ್ಹತೆ ಆಧಾರಿತ):
ಮಾಸ್ಟರ್ಸ್ ಆಫ್ ಫಿಲಾಸಫಿ ಇನ್ ಅಪ್ಲಯ್ಡ ಎಪಿಡೆಮಿಯಾಲಜಿ ಸ್ಕಾಲರ್‌ಶಿಪ್, ಆಸ್ಟ್ರೇಲಿಯಾ 2019

ವಿವರ: ಅಪ್ಲಯ್ಡ ಎಪಿಡೆಮಿಯಾಲಜಿಯಲ್ಲಿ ಎಂಫಿಲ್ ಅಧ್ಯಯನ ನಡೆಸಲು ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ(ಎಎನ್‌ಯು) 11 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತದೆ. ಅಲ್ಲದೆ ಅಭ್ಯರ್ಥಿಗಳ ಸಾಧನೆಯ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಜೀವನ ವೆಚ್ಚದ ಪಾವತಿ ಸೇರಿದಂತೆ ಇತರ ಹಲವು ಸೌಲಭ್ಯಗಳಿವೆ.
ಅರ್ಹತೆ: ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ(ಎಎನ್‌ಯು)ನಲ್ಲಿ ಅಪ್ಲಯ್ಡಾ ಎಪಿಡೆಮಿಯಾಲಜಿಯಲ್ಲಿ ಎಂಫಿಲ್ ಅಧ್ಯಯನ ನಡೆಸಲು (ಪೂರ್ಣಾವಧಿ) ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 50 ಸಾವಿರ ಅಮೆರಿಕನ್ ಡಾಲರ್, ವಸತಿ ವೆಚ್ಚ ಮತ್ತು ಪ್ರಯಾಣ ವೆಚ್ಚದ ಮರುಪಾವತಿ, ಪ್ರಬಂಧ ಹಾಗೂ ವೈವ (ವೌಖಿಕ ಪರೀಕ್ಷೆಯ) ಭತ್ತೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MOP1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News