ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-08-09 18:41 GMT

 ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):
ಡಾ. ಬಿ.ಆರ್. ಮತ್ತು ಸಿ.ಆರ್. ಶೆಟ್ಟಿ ಸ್ಕಾಲರ್‌ಶಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್

ವಿವರ: ಡಾ. ಬಿ.ಆರ್. ಮತ್ತು ಸಿ.ಆರ್. ಶೆಟ್ಟಿ ಪ್ರತಿಷ್ಠಾನ ವ್ಯಾಪಕ ಶ್ರೇಣಿಯ ವೈದ್ಯಕೀಯ ಸಂಬಂಧಿ ಕೋರ್ಸ್ ಗಳಿಗೆ (ಪರ್ಫ್ಯೂಶನ್ ಟೆಕ್ನಾಲಜಿ, ರೇಡಿಯೋ ಥೆರಪಿ, ನರ್ಸಿಂಗ್, ಡಯಾಲಿಸಿಸ್, ಅನಸ್ತೇಶಿಯಾ ಟೆಕ್ನಾಲಜಿ, ರೆನಲ್ ಡಯಾಲಿಸಿಸ್ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾ ಲಜಿ, ಫಿಸಿಯೋಥೆರಪಿ, ಎಎನ್‌ಎಂ, ಎಕ್ಸ್-ರೇ ಟೆಕ್ನಾಲಜಿ ಇತ್ಯಾದಿ)ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಕಾಲರ್‌ಶಿಪ್ ನೀಡುತ್ತಿದೆ.
ಅರ್ಹತೆ: ಕರ್ನಾಟಕದ ಉಡುಪಿಯ ನಿವಾಸಿಯಾಗಿರಬೇಕು, ಪಿಯುಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಪಡೆದಿರಬೇಕು, ಕುಟುಂಬದ ಆದಾಯ 4 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಅಂಗವಿಕಲರಿಗೆ, ಪೋಷಕರಲ್ಲಿ ಒಬ್ಬರು ಮಾತ್ರ ಬದುಕಿರುವವರು(ಸಿಂಗಲ್ ಪೇರೆಂಟ್), ಕುಟುಂಬದವರಲ್ಲಿ ಯಾರಾದರೊಬ್ಬರು ಕ್ಯಾನ್ಸರ್, ಎಚ್‌ಐವಿ, ಎಂಡೋಸಲ್ಫಾನ್ ಪರಿಣಾಮದಿಂದ ಬಳಲುತ್ತಿರುವವರು ಹಾಗೂ ಬೀಡಿ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 60,000 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DB1

*******************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಇಗ್ನೈಟ್ ಅವಾರ್ಡ್ಸ್ 2019

ವಿವರ: ಶಾಲಾ ಮಕ್ಕಳಲ್ಲಿ ನವೀನ ಕಲ್ಪನೆ ಹಾಗೂ ಸೃಜನಶೀಲತೆಗೆ ಪ್ರೋತ್ಸಾಹ ನೀಡಲು ನ್ಯಾಶನಲ್ ಇನೊವೇಶನ್ ಫೌಂಡೇಶನ್(ಎನ್‌ಐಎಫ್) ನೀಡುವ ಸ್ಕಾಲರ್‌ಶಿಪ್. ಅತ್ಯುತ್ತಮ ತಾಂತ್ರಿಕ ಯೋಜನೆಗಳನ್ನು ಪ್ರಸ್ತುತಪಡಿಸುವ ವಿದ್ಯಾರ್ಥಿಗಳಿಗೆ ತಮ್ಮ ಯೋಜನೆಗಳನ್ನು ಮಾರುಕಟ್ಟೆಗೆ ತಕ್ಕದಾದ ರೂಪದಲ್ಲಿ ರೂಪಿಸಲು ಆರ್ಥಿಕ ನೆರವು ಒದಗಿಸಲಾಗುವುದು.
ಅರ್ಹತೆ: 17 ವರ್ಷದೊಳಗಿನ, 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ತಾಂತ್ರಿಕ ಯೋಜನೆಗಳನ್ನು ಸಲ್ಲಿಸಿದವರಿಗೆ ಅಹಮದಾಬಾದ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕಾರ್ಯಕ್ರಮ ದಲ್ಲಿ ತಮ್ಮ ಯೋಜನೆಯನ್ನು ಪ್ರದರ್ಶಿಸಲು ಉಚಿತವಾಗಿ ಪ್ರಯಾಣಿಸುವ ಸೌಲಭ್ಯವಿದೆ. ಅಲ್ಲದೆ ಸೂಕ್ತ ಆರ್ಥಿಕ ನೆರವು, ಮಾರ್ಗದರ್ಶನ, ಪ್ಯಾಟೆಂಟ್‌ಗೆ ಅರ್ಜಿ ಸಲ್ಲಿಸುವುದು ಹಾಗೂ ಇತರ ಕಾರ್ಯಗಳಿಗೆ ನೆರವು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 31, 2019
ಅರ್ಜಿ: ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜಾಲತಾಣ: http://www.b4s.in/bharati/ DAP16

********************
ವಿದ್ಯಾರ್ಥಿವೇತನ
 (ಅರ್ಹತೆ ಆಧಾರಿತ):
ಸೈಲ್ ಕಾಲರ್‌ಟ್ಯೂನ್ ಕಾಂಪಿಟೀಶನ್ 2019

ವಿವರ: ಸೃಜನಶೀಲ ಯುವ ಜನರಿಂದ ಸಂಸ್ಥೆಗೆ ಸೂಕ್ತವಾದ ಕಾಲರ್‌ಟ್ಯೂನ್ ಸಿದ್ಧಗೊಳಿಸುವ ಸ್ಪರ್ಧೆಗೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(ಸೈಲ್) ಅರ್ಜಿ ಆಹ್ವಾನಿಸಿದೆ.
ಅರ್ಹತೆ: 14 ವರ್ಷ ಮೀರಿದ ಎಲ್ಲಾ ಭಾರತೀಯ ಪೌರರು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಉತ್ತಮ ಪ್ರವೇಶಕ್ಕೆ 25,000 ರೂ. ನಗದು ಪುರಸ್ಕಾರ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 21, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SMV1

*********************
ವಿದ್ಯಾರ್ಥಿವೇತನ
(ಆದಾಯ ಆಧಾರಿತ):
ಮಹೀಂದ್ರಾ ಆಲ್ ಇಂಡಿಯಾ ಟ್ಯಾಲೆಂಟ್ ಸ್ಕಾಲರ್‌ಶಿಪ್ (ಮೈಟ್ಸ್) 2019

ವಿವರ: ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಉದ್ಯೋಗ ಆಧಾರಿತ ಡಿಪ್ಲೊಮಾ ಅಧ್ಯಯನ ನಡೆಸಲು ಆಸಕ್ತಿ ಇರುವ ಕಡಿಮೆ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
 ಅರ್ಹತೆ: 10, 12 ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾದ ಮತ್ತು ಸರಕಾರಿ ಪಾಲಿಟೆಕ್ನಿಕ್ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪದವಿಗೆ ನೋಂದಣಿ ಮಾಡಿಕೊಂಡವರು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂ.ಯಂತೆ ಮೂರು ವರ್ಷ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 22, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MA16

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News