ಹನೂರು: ಪಟ್ಟಣ ಪಂಚಾಯಿತಿ ಅಧಿಕಾರಿಗಳ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚೆ

Update: 2019-08-13 18:40 GMT

ಹನೂರು: ಕಚೇರಿಗೆ ಸಂಬಂಧವಲ್ಲದ ವ್ಯಕ್ತಿಗಳು ಪ್ರತಿ ನಿತ್ಯ ವಿನಾಕಾರಣ ಆಗಮಿಸಿ ಸಾರ್ವಜನಿಕ ಕೆಲಸಗಳಿಗೆ ಅಡಚಣೆ ಉಂಟುಮಾಡುತ್ತಿದ್ದಾರೆ ಎಂದು ಹಲವು ದೂರುಗಳು ಬರುತ್ತಿದ್ದು. ಆ ವ್ಯಕ್ತಿಗಳು ನಮಗೆ ನಿಮಗೆ ಎಷ್ಟೇ ನಂಟರಾದರೂ ಸಹ ಅವರನ್ನು ಕರ್ತವ್ಯ ಸಮಯದಲ್ಲಿ ದೂರವಿಟ್ಟು ಸಾರ್ವಜನಿಕ ಕುಂದು ಕೂರತೆಗಳನ್ನು ಆಲಿಸಿ ಎಂದು ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಸದಸ್ಯರಿಗೆ ಕಿವಿ ಮಾತನ್ನು ಶಾಸಕ ನರೇಂದ್ರ ಹೇಳಿದರು.

ಪಟ್ಟಣ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಪಟ್ಟಣದ ಅಭಿವೃದ್ದಿ ಸಂಬಂಧ ಅಧಿಕಾರಿಗಳ ಜೊತೆ ಸಮಲೋಚನೆ ನೆಡೆಸುತ್ತಾ ಮಾತನಾಡಿದ ಅವರು, 13 ವಾರ್ಡ್‍ಗಳಲ್ಲಿನ ಅಭಿವೃದ್ದಿ ವಿಚಾರದಲ್ಲಿ  ತಾರತಮ್ಯ ಮಾಡದೆ ಕುಡಿಯುವ ನೀರು, ಚರಂಡಿ ಶುದ್ದತೆ, ವಿದ್ಯುತ್ ನಿರ್ವಹಣೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು  ಒತ್ತು ನೀಡಬೇಕು. ಮತ್ತು ಪಟ್ಟಣದ ಅಂಗಡಿ ಮಳಿಗೆಗಳನ್ನು ಮರು ಟೆಂಡರ್ ಮಾಡುವ ಸಂಬಂಧ ಈ ಪ್ರಕ್ರಿಯೆಯನ್ನು ಕೂಡಲೇ ಚುರುಕುಗೂಳಿಸಿ ಎಂದರಲ್ಲದೆ ಪಟ್ಟಣ ಪಂಚಾಯಿತಿ ಕಛೇರಿಯೊಳಗೆ ಸದಸ್ಯರು ಸೇರಿದಂತೆ ಸಾರ್ವಜನಿಕರು ಅನಗತ್ಯವಾಗಿ ಕುಳಿತುಕೊಂಡು ಕಾಲಾಹರಣ ಮಾಡುತ್ತಿರುವುದಾಗಿ ನನ್ನ ಗಮನಕ್ಕೆ ಬಂದಿರುತ್ತದೆ. ಯಾರೆ ಆಗಲಿ ಅವರ ಕೆಲಸ ಮುಗಿದ ಮೇಲೆ ಹೋಗುವಂತೆ ಕಟ್ಟುನಿಟ್ಟಾಗಿ ಸೂಚಿಸಿ. ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ 13 ವಾರ್ಡ್‍ಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಂದು ವಾರ್ಡ್‍ಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದರು.  

ಪಟ್ಟಣ ಪಂಚಾಯತಿಗೆ ಸೇರಿದ ಹುಲ್ಲೇಪುರ ಗ್ರಾಮದ ಸರ್ವೆ ನಂ. 712ರಲ್ಲಿ 3.40 ಎಕರೆ ಜಮೀನಿದ್ದು, ಅದರಲ್ಲಿ 2.48 ಜಮೀನು ಸರ್ಕಾರಿ ಆಸ್ತಿಯಾಗಿರುವ ನಿಟ್ಟಿನಲ್ಲಿ ಆಳತೆ ಮಾಡಿಸಿ ಬಂದೋಬಸ್ತ್ ಮಾಡಿ ಆ ಸ್ಥಳದಲ್ಲಿ ಸರ್ಕಾರ ಆದೇಶದಂತೆ ಗುಂಪು ಮನೆ ನಿರ್ಮಿಸಲು ತುರ್ತಾಗಿ ಸರ್ವೇ ಕಾರ್ಯ ಆಗಬೇಕಾಗಿದ್ದು,  ಈ ಬಗ್ಗೆ ತುರ್ತಾಗಿ ಕ್ರಮಕೈಗೂಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಭಿವೃದ್ದಿಗೆ ಕ್ರಮವಹಿಸಿ: ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಿಸಲು ಅಂದಾಜಿಸಲಾಗಿತ್ತು. ಅದರಂತೆ ಈಗಾಗಲೆ 1 ಕೋಟಿ ರೂ. ಹಣ ಬಿಡುಗಡೆಯಾಗಿರುತ್ತದೆ. ಈ ಕಾಮಗಾರಿ  ಶೀಘ್ರದಲ್ಲಿ ಪ್ರಾರಂಭಿಸಲು ಕೂಡಲೇ ಕ್ರಮ ವಹಿಸಿ ಉಳಿಕೆ ಹಣವನ್ನು ಮುಂದಿನ ದಿನಗಳಲ್ಲಿ ಬಿಡುಗೂಳಿಸಲು ಕ್ರಮಕೈಗೂಳ್ಳಲಾಗುವುದು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ  ಶುದ್ದ ಕುಡಿಯುವ ನೀರಿನ ಘಟಕ ಸರಿಪಡಿಸಿ ಅದರ ನಿರ್ವಾಹಣೆಯನ್ನು ಯಾವುದಾದರೂ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ನೀಡುವಂತೆ ಕ್ರಮ ವಹಿಸಬೇಕು ಎಂದರು    

ಈ ಸಂದರ್ಭದಲ್ಲಿ  ಸದಸ್ಯರಾದ ಗಿರೀಶ್, ಸಂಪತ್‍ಕುಮಾರ್, ಹರೀಶ್‍ಗೌಡ, ಸೋಮಶೇಖರ್, ಮಹೇಶ್, ಮುಖಂಡರಾದ ಜಯಪ್ರಕಾಶ ಗುಪ್ತ, ರಮೇಶ್ ನಾಯ್ಡು. ಸೇರಿದಂತೆ ಮುಖ್ಯಾಧಿಕಾರಿ ಮೂರ್ತಿ, ಸಂಘಟನಾಧಿಕಾರಿ ಬೈರಪ್ಪ ಹಾಗೂ ಕಿರಿಯ ಅಭಿಯಂತರ ಶಿವಶಂಕರ ಆರಾಧ್ಯೆ ಇನ್ನಿತರರು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News