ಹಕ್ಕಿಗಳ ಗುಂಪಿಗೆ ಢಿಕ್ಕಿ ಹೊಡೆದು ಗದ್ದೆಗೆ ಇಳಿದ 233 ಮಂದಿಯಿದ್ದ ವಿಮಾನ: 26 ಪ್ರಯಾಣಿಕರಿಗೆ ಗಾಯ

Update: 2019-08-15 12:33 GMT
Photo: Reuters

ಮಾಸ್ಕೋ: ಒಟ್ಟು 226 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿಯಿದ್ದ ರಷ್ಯಾದ ವಿಮಾನವೊಂದಕ್ಕೆ ಹಕ್ಕಿಗಳ ಹಿಂಡೊಂದು ಢಿಕ್ಕಿ ಹೊಡೆದು ಕನಿಷ್ಠ 23 ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ವರದಿಯಾಗಿದೆ. 

ಉರಾಲ್ ಏರ್‍ಲೈನ್ಸ್ ಗೆ ಸೇರಿದ ಎ321 ವಿಮಾನ  ಮಾಸ್ಕೋದ ಝುಕೊವ್‍ಸ್ಕಿ ವಿಮಾನ ನಿಲ್ದಾಣದಿಂದ ಕ್ರಿಮಿಯಾದ ಸಿಮ್ಫೆರೊಪೊಲ್‍ಗೆ ಹೊರಟಿತ್ತು. ಹಾರಾಟ ಅರಂಭಿಸಿದ ಕೆಲವೇ ಕ್ಷಣಗಳಲ್ಲಿ ಹಕ್ಕಿಗಳು ಢಿಕ್ಕಿ ಹೊಡೆದು ನೇರ ವಿಮಾನದ ಎರಡು ಇಂಜಿನ್ ಗಳನ್ನು ಪ್ರವೇಶಿಸಿದ ನಂತರ ಉಂಟಾದ ತಾಂತ್ರಿಕ ಅಡಚಣೆಯನ್ನು ಗಮನದಲ್ಲಿರಿಸಿ ಪೈಲಟ್ ವಿಮಾನವನ್ನು ನಿಲ್ದಾಣದಿಂದ ಸುಮಾರು ಒಂದು ಕಿಮೀ ದೂರದ ಗದ್ದೆಯಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 23 ಪ್ರಯಾಣಿಕರ ಪೈಕಿ ಐದು ಮಂದಿ ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದ ಪೈಲಟ್ ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯನ್ನು ಉರಾಲ್ ಏರ್‍ಲೈನ್ಸ್ ಶ್ಲಾಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News