ಕಿಸಾನ್ ಸಮ್ಮಾನ್‌ ಯೋಜನೆಗಾಗಿ ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯಕ್ಕೆ ಕತ್ತರಿ ?

Update: 2019-08-15 14:52 GMT

ಬೆಂಗಳೂರು, ಆ.15: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಹೊಂದಿಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದ ‘ಅನ್ನಭಾಗ್ಯ’ ಯೋಜನೆಗೆ ಕತ್ತರಿ ಪ್ರಯೋಗಿಸಲು ಬಿಜೆಪಿ ಸರಕಾರ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನವೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 4 ಸಾವಿರ ರೂ. ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ, ಕೇಂದ್ರ ಸರಕಾರದ 6 ಸಾವಿರ ಹೆಚ್ಚುವರಿ ಹಣವು ಕೂಡ ಸೇರಿದೆ. ಆದರೆ, ಈ ಘೋಷಣೆಯಿಂದಾಗಿ ಸರಕಾರದ ಮೇಲೆ 2,200 ಕೋಟಿ ರೂಪಾಯಿ ಹೊರೆ ಬೀಳಲಿದೆ ಎನ್ನಲಾಗಿದೆ. ಹಾಗಾಗಿ ಆರ್ಥಿಕ ಇಲಾಖೆಯೂ ಈ ಹೊರೆಯನ್ನು ಸರಿದೂಗಿಸುವುದು ಕಷ್ಟವೆಂದಿದ್ದು, ಯೋಜನೆ ಜಾರಿ ಆಗಲೇಬೇಕೆಂದರೆ ಚಾಲ್ತಿಯಲ್ಲಿರುವ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಬೇಕಾದ ಅಗತ್ಯವಿದೆ ಎಂದು ಕೆಲ ಹಣಕಾಸು ತಜ್ಞರು ಸಲಹೆ ಮಾಡಿದ್ದಾರೆಂದು ತಿಳಿದುಬಂದಿದೆ.

ಇದಕ್ಕಾಗಿ 2 ಕೆ.ಜಿ ಅಕ್ಕಿ, 1 ಕೆ.ಜಿ ಬೇಳೆ ಕಡಿತ ಮಾಡಿದರೆ 500 ಕೋಟಿ ಉಳಿತಾಯವಾಗಲಿದೆ. ಆಗ ಸ್ವಲ್ಪಮಟ್ಟಿಗಾದರು ನಿಮ್ಮ ಯೋಜನೆ ಸರಿದೂಗಿಸಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ, ಸಿದ್ದರಾಮನ್ನಯವರ ಅನ್ನಭಾಗ್ಯಕ್ಕೆ ಕತ್ತರಿ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News