ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ: ಕೊಡಗು ಜಿಲ್ಲಾಧಿಕಾರಿ ಅಭಯ

Update: 2019-08-15 17:17 GMT

ಕೊಡಗು, ಆ.15: ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆಯಾಗುವವರೆಗೂ ಕೇಂದ್ರಗಳಲ್ಲಿ ಅವರನ್ನು ಎಲ್ಲಾ ಸೌಲಭ್ಯಗಳೊಂದಿಗೆ ನೋಡಿಕೊಳ್ಳಲಾಗುತ್ತದೆ. ಯಾವುದೇ ರೀತಿಯ ಆತಂಕ ಸಂತ್ರಸ್ತರಲ್ಲಿ ಬೇಡ ಎಂದೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಯ ನೀಡಿದ್ದಾರೆ.

ಹೊರ ಜಿಲ್ಲೆಗಳಿಂದ ಪರಿಹಾರ ಸಾಮಾಗ್ರಿಗಳಿಗೆ ಮಾತ್ರ ಜಿಲ್ಲಾಡಳಿತ ನಕಾರ ಸೂಚಿಸಿದ್ದು, ಕೊಡಗು ಜಿಲ್ಲೆಯಲ್ಲಿನ ದಾನಿಗಳು ಪರಿಹಾರ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಸಹಾಯ ನೀಡಲು ಮುಂದೆ ಬರಬಹುದು. ಆದರೆ ನೇರವಾಗಿ ಕೇಂದ್ರಗಳಿಗೆ ತೆರಳಿ ಪರಿಹಾರ ನೀಡುವ ಬದಲಿಗೆ ಆಯಾ ತಾಲೂಕು ಕೇಂದ್ರದ ತಾಲೂಕು ಕಚೇರಿಯ ಗೋದಾಮಿಗೆ ಪರಿಹಾರ ಸಾಮಾಗ್ರಿಗಳನ್ನು ನೀಡಬೇಕಾಗುತ್ತದೆ. ಇಂತಹ ಸಾಮಗ್ರಿಗಳನ್ನು ನಿರಾಶ್ರಿತರಿಗೆ ಸರ್ಕಾರದ ವತಿಯಿಂದ  ನೀಡುವ ಸಂದರ್ಭ ದಾನಿಗಳು ಕೂಡ ಹಾಜರಿರಲು ಅವಕಾಶ ನೀಡಲಾಗಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.  

ಹೀಗಾಗಿ ಜಿಲ್ಲೆಯೊಳಗಿನ ದಾನಿಗಳು, ಸಂಘಸಂಸ್ಥೆಗಳು ಪರಿಹಾರ ಸಾಮಾಗ್ರಿಗಳನ್ನು ಜಿಲ್ಲಾಡಳಿತಕ್ಕೆ ತಾಲೂಕು ಕಚೇರಿ ಮೂಲಕ ನೀಡುವಂತೆಯೂ ಜಿಲ್ಲಾಧಿಕಾರಿ ಮನವಿ ಮಾಡಿದರು. ಅಲ್ಲದೆ ಯಾವುದೇ ಪರಿಹಾರ ಕೇಂದ್ರಗಳಲ್ಲಿ ಸಮಸ್ಯೆಯಿದ್ದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ಕೊಠಡಿಗೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News