ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-08-16 18:32 GMT

ವಿದ್ಯಾರ್ಥಿವೇತನ
(ಸಂಶೋಧನೆ ಆಧಾರಿತ):
ಎಸಿಬಿಆರ್ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್, ದಿಲ್ಲಿ ವಿವಿ 2019

 ವಿವರ: ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳಿಗೆ ‘ಡ್ರಗ್ ರೆಸಿಸ್ಟೆನ್ಸ್ ಡೆವಲಪ್‌ಮೆಂಟ್’ ಕ್ಷೇತ್ರದಲ್ಲಿ ಜ್ಯೂನಿಯರ್ ರಿಸರ್ಚ್ ಫೆಲೋಗಳಾಗಿ ಸಂಶೋಧನೆ ನಡೆಸಲು ಡಾ ಬಿ ಆರ್ ಅಂಬೇಡ್ಕರ್ ಸೆಂಟರ್ ಫಾರ್ ಬಯೊಮೆಡಿಕಲ್ ರಿಸರ್ಚ್ (ಎಸಿಬಿಆರ್) ಅರ್ಜಿ ಆಹ್ವಾನಿಸಿದೆ.
ಅರ್ಹತೆ: ವಿಜ್ಞಾನದ ಆಯ್ದ ವಿಷಯಗಳಲ್ಲಿ ಕನಿಷ್ಠ ಶೇ. 55 ಅಂಕಗಳೊಂದಿಗೆ ಎಂಎಸ್ಸಿ ಪದವಿ ಪಡೆದ, ಸಿಎಸ್‌ಐಆರ್/ಯುಜಿಸಿ/ಎನ್‌ಇಟಿ ಅಥವಾ ಜಿಎಟಿಇಗೆ ಅರ್ಹತೆ ಗಳಿಸಿದವರು (28 ವರ್ಷದೊಳಗಿನವರು) ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ 7 ತಿಂಗಳ ಅವಧಿಯ ಕೋರ್ಸ್‌ಗೆ ಪ್ರತೀ ತಿಂಗಳು 25,000 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 23, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/ACB1
*********************

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಡ್ಯಾನಿಷ್ ಗವರ್ನ್‌ಮೆಂಟ್ ಸ್ಕಾಲರ್‌ಶಿಪ್ 2019

ವಿವರ: ಡೆನ್ಮಾರ್ಕ್‌ನ ‘ದಿ ಯುನಿವರ್ಸಿಟಿ ಆಫ್ ಸದರ್ನ್ ಡೆನ್ಮಾರ್ಕ್’ ನಲ್ಲಿ ಇಂಜಿನಿಯರಿಂಗ್‌ನಲ್ಲಿ ಉನ್ನತ ಅಧ್ಯಯನ ನಡೆಸಲು ಉನ್ನತ ಶಿಕ್ಷಣ ಮತ್ತು ವಿಜ್ಞಾನ ಇಲಾಖೆ ಭಾರತದ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸ್ಕಾಲರ್‌ಶಿಪ್ ಒದಗಿಸಲಾಗುವುದು.
 ಅರ್ಹತೆ: ಡೆನ್ಮಾರ್ಕ್‌ನ ಸಾಂಡರ್‌ಬೋರ್ಗ್‌ನಲ್ಲಿ ಮೆಕ್ಯಾಟ್ರಾನಿಕ್ಸ್, ಇನೊವೇಷನ್ ಮತ್ತು ಬ್ಯುಸಿನೆಸ್ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂಎಸ್ಸಿ ಇಂಜಿನಿಯರಿಂಗ್ ಪದವಿ ಅಧ್ಯಯನ ನಡೆಸಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಸಂಪೂರ್ಣ ಮನ್ನಾ, ಜೊತೆಗೆ ತಿಂಗಳಿಗೆ 3000 ಡಿಕೆಕೆ (ಡೆನ್ಮಾರ್ಕ್‌ನ ಕರೆನ್ಸಿ) ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 1, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜಾಲತಾಣ: http://www.b4s.in/bharati/ DGS2

**********************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ದಿ ಸಿಮನ್ ಲೀ ಫೌಂಡೇಶನ್ ಸ್ಕಾಲರ್‌ಶಿಪ್ ಇನ್ ಹಿಸ್ಟೋರಿಕಲ್ ಕೀಬೋರ್ಡ್ ಪರ್ಫಾಮೆನ್ಸ್ 2019

ವಿವರ: ಆಸ್ಟ್ರೇಲಿಯಾದ ಎಡಿತ್ ಕೊವಾನ್ ವಿವಿ ಸಂಗೀತ ಮತ್ತು ಕಲೆಯ ವಿದ್ಯಾರ್ಥಿಗಳಿಗೆ ‘ಕ್ಲಾಸಿಕಲ್ ಕೀಬೋರ್ಡ್ ಪರ್ಫಾಮೆನ್ಸ್’ನಲ್ಲಿ ಉನ್ನತ ಅಧ್ಯಯನ ನಡೆಸಲು , ಬ್ಯಾಚುಲರ್ ಆಫ್ ಮ್ಯೂಸಿಕ್ ಪ್ರೋಗ್ರಾಂ ಪದವಿಗೆ ಸ್ಕಾಲರ್‌ಶಿಪ್ ಒದಗಿಸುತ್ತದೆ.
ಅರ್ಹತೆ: ಪೂರ್ಣಾವಧಿಯ ಡಬ್ಲುಎಎಪಿಎ ಬ್ಯಾಚುಲರ್ ಆಫ್ ಮ್ಯೂಸಿಕ್ ಕ್ಲಾಸಿಕಲ್ ಪರ್ಫಾಮೆನ್ಸ್- ಇನ್‌ಸ್ಟ್ರುಮೆಂಟಲ್ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ಭಾರತೀಯ ವಿದ್ಯಾರ್ಥಿಗಳು ಅರ್ಹರು.
ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ಆಸ್ಟ್ರೇಲಿಯನ್ ಡಾಲರ್ ಮೊತ್ತದ ಸ್ಕಾಲರ್‌ಶಿಪ್ ಹಾಗೂ ಅಂತಿಮ ಎರಡು ವರ್ಷ ಪ್ರಯಾಣ ವೆಚ್ಚ ಹಾಗೂ ಯುರೋಪಿಯನ್ ಕೀಬೋರ್ಡ್ ಅಧ್ಯಯನ ನಡೆಸಲು ಹೆಚ್ಚುವರಿ 20,000 ಆಸ್ಟ್ರೇಲಿಯನ್ ಡಾಲರ್ ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 1, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SLF1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News